ಭಾರತದ ನೆರವಿಗೆ ಬಂದ ಅಮೆರಿಕಾದ ವಾಲ್‍ಮಾರ್ಟ್ ಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಮೇ 1-ಅಮೆರಿಕಾದ ವಾಲ್‍ಮಾರ್ಟ್ ಸಂಸ್ಥೆ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ 20 ಆಕ್ಸಿಜನ್ ಉತ್ಪಾದನಾ ಘಟಕಗಳು ಹಾಗೂ 20 ಕ್ರಯೋಜನಿಕ್ ಕಂಟೈನರ್‍ಗಳನ್ನು ನೀಡಲು ಮುಂದೆ ಬಂದಿದೆ.

ಜೀವಜನ್ಯ ಅಮ್ಲಜನಕ ಶೇಖರಣೆ ಹಾಗೂ ಸಾಗಾಟಕ್ಕೆ ಅನುಕೂಲವಾಗುವ ಉದ್ದೇಶದಿಂದ ಈ ನೆರವು ನೀಡಲಾಗಿದೆ. ಇದರ ಜತೆಗೆ ಕೊರೊನಾ ಸೋಂಕು ನಿವಾರಣಗೆ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಯೊಂದಕ್ಕೆ 2 ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಕೊರೊನಾ ಸೋಂಕಿತರಿಗೆ ಮನೆಯಲ್ಲಿ ಇಲ್ಲವೆ ಆಸ್ಪತ್ರೆಯಲ್ಲಿ ಬಳಕೆ ಮಾಡಿಕೊಳ್ಳಲು ಅನುಕೂಲವಾಗುವಂತಹ 500 ಆಕ್ಸಿಜನ್ ಸಿಲಿಂಡರ್‍ಗಳು ಹಾಗೂ 3000 ಅಮ್ಲಜನಕ ಸಾಂದ್ರಕಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಉನ್ನತ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

Facebook Comments

Sri Raghav

Admin