ಹೊಸ ಠಾಣಾಧಿಕಾರಿ ಸ್ವಾಗತ ಕೋರಿ, ಸಿಹಿ ತಿನಿಸಿದ ಗ್ರಾಮ ಮುಖ್ಯಸ್ಥ ಸ್ಥಳದಲ್ಲೇ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Police--01

ಮುಝಪರ್‍ನಗರ್, ಜು.26-ಹೊಸ ಪೊಲೀಸ್ ಅಧಿಕಾರಿಯನ್ನು ಸ್ವಾಗತಿಸಿ, ಅಭಿನಂದಿಸಿ, ಸಿಹಿ ತಿನಿಸಿದ ಗ್ರಾಮ ಮುಖ್ಯಸ್ಥನೊಬ್ಬ ದೊಡ್ಡ ಬೆಲೆಯನ್ನೇ ತೆರಬೇಕಾಯಿತು..! ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಅತ್ಯಾಚಾರ ಯತ್ನ ಮತ್ತು ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳ ಆರೋಪಿಯಾಗಿದ್ದ ಗ್ರಾಮ ಪಂಚಾಯಿತಿ ಮುಖ್ಯಸ್ಥ ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುವಂತಾಗಿದೆ.

ಪ್ರತಾಪ್‍ಪುರ್ ಗ್ರಾಮದ ಮುಖ್ಯಸ್ಥ ಇತ್ವರಿ ಸಿಂಗ್ ಮೇಲೆ ರೇಪ್ ಯತ್ನ ಸೇರಿದಂತೆ ಎರಡು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ನಿನ್ನೆ ಈ ಗ್ರಾಮದ ಜಿನ್‍ಜಾನಾ ಪೊಲೀಸ್ ಠಾಣೆಗೆ ಹೊಸ ಸ್ಟೇಷನ್ ಹೌಸ್ ಆಫೀಸರ್ (ಠಾಣಾಧಿಕಾರಿ ಅಥವಾ ಎಸ್‍ಎಚ್‍ಒ) ಆಗಿ ರಾಜ್‍ಕುಮಾರ್ ಶರ್ಮ ನಿಯೋಜನೆಗೊಂಡಿದ್ದರು. ತಾನು ಗ್ರಾಮ ಮುಖ್ಯಸ್ಥನೆಂಬ ದರ್ಪದೊಂದಿಗೆ ಠಾಣೆ ಬಂದು ಪೋಸು ನೀಡಿದ ಸಿಂಗ್, ಹೊಸ ಅಧಿಕಾರಿಯನ್ನು ಸ್ವಾಗತಿಸಿ, ಅಭಿನಂದಿಸಿ, ಸಿಹಿ ತಿನಿಸಿದೆ. ಇದೇ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ ಗ್ರಾಮ ಮುಖ್ಯಸ್ಥನ ಕಲ್ಯಾಣ ಗುಣಗಳು ಮತ್ತು ವೃತ್ತಾಂತವನ್ನು ತಿಳಿಸಿದ್ದರು. ತನ್ನನ್ನು ಅಭಿನಂದಿಸಿ ಸಿಹಿ ತಿನಿಸುತ್ತಿದ್ದಂತೆ ಸಿಂಗ್‍ನನ್ನು ಠಾಣೆಯಲ್ಲೇ ಬಂಧಿಸಿ ಇನ್ಸ್‍ಪೆಕ್ಟರ್ ಕಂಬಿ ಹಿಂದೆ ತಳ್ಳಿದರು. ರಾಜ್‍ಕುಮಾರ್ ಶರ್ಮ ಅವರ ಈ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ತಿವಾರಿ ಮೆಚ್ಚುಗೆ ಸೂಚಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin