ನಿವೃತ್ತ ಯೋಧರಿಗೆ ಹುಟ್ಟೂರಲ್ಲಿ ಆತ್ಮೀಯ ಸ್ವಾಗತ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಅ.7- ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ್ದೇವೆ ಭಾರತ ಮಾತೆಯ ಸೇವೆಗೆ ನಾವು ಎಂದೆಂದೂ ಸಿದ್ಧ ಎಂದು ನಿವೃತ್ತ ಯೋಧರಾದ ರಾಮಕೃಷ್ಣೇಗೌಡ ಮತ್ತು ಆಂಜನಪ್ಪ ಹೇಳಿದರು.

ಸೇನೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಹಿಂದಿರುಗುವ ಮುನ್ನ ಜಿಲ್ಲಾ ಕೇಂದ್ರದಲ್ಲಿ ಟೀಂ ಯೋಧ ತಂಡ-ಕೋಲಾರ ನಾಗರಿಕರು ಯೋಧರಿಗೆ ಹಣೆಗೆ ತಿಲಕ ಇಟ್ಟು ಆರತಿ ಬೆಳಗಿ ಬರ ಮಾಡಿಕೊಂಡರು.

ಸ್ವಾಗತ ಸ್ವೀಕರಿಸಿ ಮಾತನಾಡಿದ ಯೋಧರು ನಾವು ಇದೇ ತಾಲೂಕಿನ ತಂಡಾಲ ಗ್ರಾಮ ಮುಳಬಾಗಿಲು ತಾಲೂಕಿನ ಊರುಕುಂಟೆ ನಿಟ್ಟೂರಿನ ಗ್ರಾಮದವರಾಗಿ 22ವರ್ಷಗಳ ಹಿಂದೆ ಸೇನೆಗೆ ಸೇರಿದ್ದು ಜಮ್ಮು-ಕಾಶ್ಮೀರ ನಕ್ಸಲರ ಪ್ರದೇಶಗಳು ಸೇರಿದಂತೆ ದೇಶದ ಹಲವಾರು ಜಾಗಗಳಲ್ಲಿ ಸೇವೆಸಲ್ಲಿಸಿದ್ದೇವೆ ಎಂದು ಹೇಳಿ ಇಷ್ಟು ವರ್ಷ ದೇಶ ನಮಗೆ ಎಲ್ಲವನ್ನು ಕೊಟ್ಟಿದೆ. ನಮ್ಮ ಕೊನೆಯ ಉಸಿರು ಇರುವವರೆಗೂ ದೇಶ ಸೇವೆಗೆ ಮೀಸಲಾಗಿರುತ್ತೇವೆ ಎಂದರು.

ನಿವೃತ್ತ ಯೋಧರನ್ನು ತೆರೆದ ಜೀಪಿನಲ್ಲಿ ನಗರದಾದ್ಯಾಂತ ಮೆರವಣಿಗೆ ನಡೆಸಿ ಭಾರತ ಸೇನೆ ಮತ್ತು ರೈತರಿಗೆ ಜಯಕಾರ ಕೂಗಿದರು. ಸಮಾರಂಭದಲ್ಲಿ ಸೋಮಶಂಕರ ಮಾಜಿ ಯೋಧರಾದ ರವಿ, ಬಾಲಾಜಿ, ಪ್ರವೀಣ್‍ಕುಮಾರ್ ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin