ದಾಳಿ ಮಾಡಿದರೆ ಬುದ್ದಿ ಕಲಿಸಲು ನಾವು ರೆಡಿ : ಇರಾನ್‍ಗೆ ದೊಡ್ಡಣ್ಣ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಮೇ 7- ಅಮೆರಿಕ ಮತ್ತು ಇರಾನ್ ನಡುವೆ ವಿದ್ವೇಷ ಮತ್ತಷ್ಟು ಭುಗಿಲೆದ್ದಿದೆ. ಅಮೆರಿಕ ವಿರುದ್ಧ ಗುಡುಗುತ್ತಿರುವ ಇರಾನ್ ಜೊತೆ ನಾವು ಯುದ್ಧ ಬಯಸುವುದಿಲ್ಲ.  ಆದರೆ ಟೆಹ್ರಾನ್‍ನ ಯಾವುದೇ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲು ವಾಷಿಂಗ್ಟನ್ ಸರ್ವಸನ್ನದವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‍ಗೆ ಈ ನಿಟ್ಟಿನಲ್ಲಿ ಸ್ಪಷ್ಟ ಎಚ್ಚರಿಕೆ ನೀಡುವ ಉದ್ದೇಶದಿಂದಲೇ ಅಮೆರಿಕ ಮಧ್ಯ ಪ್ರಾಚ್ಯದಲ್ಲಿ ನೌಕಾ ಆಕ್ರಮಣ ಸಮೂಹ ಮತ್ತು ಬಾಂಬರ್ ಕಾರ್ಯಪಡೆಯನ್ನು ನಿಯೋಜಿಸಿ ಸಜ್ಜಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ವಾಷಿಂಗ್ಟನ್‍ನಲ್ಲಿ ಹೇಳಿಕೆ ನೀಡಿರುವ ಬೋಲ್ಟನ್, ಇರಾನ್ ಇತ್ತೀಚಿನ ದಿನಗಳಲ್ಲಿ ಅಪ್ರಚೋದಿತ ಕ್ರಮಗಳನ್ನು ಅನುಸರಿಸಿ ಏಷ್ಯಾ ಖಂಡದಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ನಾವು ಇದನ್ನು ಲಘುವಾಗಿ ಪರಿಗಣಿಸಿಲ್ಲ. ಇರಾನ್ ಎಚ್ಚರಿಕೆಗೆ ಸೂಕ್ತ ಪ್ರತಿ ಎಚ್ಚರಿಕೆ ನೀಡಲು ನಾವು ಈಗಾಗಲೇ ಯುಎಸ್‍ಎಸ್ ಅಬ್ರಹಾಂ ಲಿಂಕನ್ ಸಮರ ನೌಕೆಯನ್ನು ಸನ್ನದ್ಧಗೊಳಿಸಿದ್ದೇವೆ ಎಂದು ತಿಳಿಸಿದರು.

ಟ್ರಂಪ್ ಆಡಳಿತ ಯಾವುದೇ ಕಾರಣಕ್ಕೂ ಯಾವ ದೇಶದ ಮೇಲೆ ಯುದ್ಧ ಬಯಸುವುದಿಲ್ಲ. ಆದರೆ ವಿನಾಕಾರಣ ನಮ್ಮ ಮೇಲೆ ಬಿದ್ದರೆ ನಾವು ಅದಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತೇವೆ ಎಂದು ಬೋಲ್ಟನ್ ಇರಾನ್‍ಗೆ ಎಚ್ಚರಿಕೆ ನೀಡಿದರು.

ಮಧ್ಯಪ್ರಾಚ್ಯದ ಅನೇಕ ದೇಶಗಳು ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿವೆ. ಆದರೆ ಇರಾನ್ ಮೊದಲಿನಿಂದ ನಮ್ಮ ದೇಶದ ವಿರುದ್ಧ ಹಗೆ ಸಾಧಿಸುತ್ತಲೇ ಇದೆ. ಅಲ್ಲದೆ ಅಮೆರಿಕದ ಮಿತ್ರ ದೇಶಗಳ ಸಂಬಂಧ ಹಾಳು ಮಾಡಲು ಹವಣಿಸುತ್ತಿದೆ ಎಂದು ಹೇಳಿದರು.

ಇರಾನ್‍ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ, ಚೀನಾ, ಜಪಾನ್, ಉತ್ತರ ಕೊರಿಯಾ ಮತ್ತು ಟರ್ಕಿ ವಿರುದ್ಧ ಈಗಾಗಲೇ ಟ್ರಂಪ್ ಎಚ್ಚರಿಕೆ ನೀಡಿ ದಿಗ್ಭಂದನ ಬೆದರಿಕೆ ಹಾಕಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ