ಮತ್ತೆ ಅಖಾಡಕ್ಕಿಳಿಯಲು ವಾಷಿಂಗ್ಟನ್ ಸುಂದರ್ ರೆಡಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.24- ಗಾಯದಿಂದಾಗಿ ಸುದೀರ್ಘ ಅವಯವರೆಗೂ ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದ ಭಾರತದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅವರು ಮತ್ತೆ ಅಂಗಳಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಕಳೆದ ಮಾರ್ಚ್‍ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯ ವೇಳೆ ವಾಷಿಂಗ್ಟನ್ ಸುಂದರ್ ಅವರು ಗಾಯಗೊಂಡಿದ್ದರಿಂದ ಐಪಿಎಲ್, ಚುಟುಕು ವಿಶ್ವಕಪ್, ನ್ಯೂಜಿಲ್ಯಾಂಡ್ ಸರಣಿಯಲ್ಲಿ ಆಡುವ ಅವಕಾಶವನ್ನು ಕೈಚೆಲ್ಲಿದ್ದರು.

ವಾಷಿಂಗ್ಟನ್ ಸುಂದರ್ ಗಾಯಗೊಂಡು ಚೇತರಿಸಿಕೊಂಡ ನಂತರ ಬೆಂಗಳೂರಿನಲ್ಲಿರುವ ಎನ್‍ಸಿಬಿ ಅಕಾಡೆಮಿಯಲ್ಲಿ ತಮ್ಮ ದೈಹಿಕ ಸಾಮಥ್ರ್ಯವನ್ನು ಪ್ರದರ್ಶಿಸಿ ಉತ್ತೀರ್ಣರಾಗಿದ್ದರಿಂದ ಸುಂದರ್‍ಗೆ ಕ್ರಿಕೆಟ್ ಅಂಗಳಕ್ಕೆ ಇಳಿಯಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ಗಾಯಗೊಂಡ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳಬೇಕಾದರೆ ದೇಶಿಯ ಕ್ರಿಕೆಟ್‍ನಲ್ಲಿ ಆಡುವುದು ಕೂಡ ಕಡ್ಡಾಯವಾಗಿರುವುದರಿಂದ ಡಿಸೆಂಬರ್ 8 ರಿಂದ ನಡೆಯಲಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡು ತಂಡದ ಪರ ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್ ಮೋಡಿಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ.

ದಿನೇಶ್ ಕಾರ್ತಿಕ್‍ಗೆ ಬುಲಾವ್:
ಭಾರತ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿರುವ ತಮಿಳುನಾಡಿನ ಮತ್ತೊಬ್ಬ ಅಂತರರಾಷ್ಟ್ರೀಯ ಆಟಗಾರ ದಿನೇಶ್ ಕಾರ್ತಿಕ್ ಕೂಡ ವಿಜಯ್ ಹಜಾರೆಗೆ ಆಯ್ಕೆ ಮಾಡಿರುವ ತಮಿಳುನಾಡಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದಿನೇಶ್ ಕಾರ್ತಿಕ್‍ಗೆ ಸಯ್ಯದ್ ಮುಷ್ತಾಕ್ ಸರಣಿಯಲ್ಲೇ ಆಡುವ ಮನಸ್ಸಿತ್ತಾದರೂ ಅವಕಾಶ ಸಿಕ್ಕಿರಲಿಲ್ಲ.

Facebook Comments