ನಿಮಗಿದು ಗೊತ್ತೇ..? ಸಿಗರೆಟ್‌ಗಿಂತ ಟಿವಿ ನೋಡುವುದು ಅಪಾಯಕಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

1ಗಂಟೆ ನಿರಂತರ ಟೀವಿ ವೀಕ್ಷಣೆಯಿಂದ 22 ನಿಮಿಷ ಆಯಸ್ಸು ಕಡಿಮೆ ಆಗುತ್ತೆ..!  ಡಾ. ಮಂಜುನಾಥ್ ಬಿಚ್ಚಿಟ್ಟ ಆಘಾತಕಾರಿ ಆರೋಗ್ಯ ಮಾಹಿತಿ..! ಗಂಟೆ ಗಟ್ಟಲೇ ಟೀವಿ ನೋಡುವುದು ಸಿಗರೇಟ್ ಸೇವಿಸುವುದಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರವಂತೆ.., ಸ್ನೇಹಿತ್ರೆ.. ನೀವು ಇದನ್ನು ನಂಬಲೇ ಬೇಕು ಯಾಕಂದ್ರೆ ಇಂತಹದೊಂದು ಆಘಾತಕಾರಿ ಸಂಗತಿ ಬಿಚ್ಚಿಟ್ಟಿರುವುದು ಬೇರೆ ಯಾರೋ ಅಲ್ಲಾ. ಅವರು ಖ್ಯಾತ ಜಯದೇವ ಹೃದ್ರೋಗ ತಜ್ಞ ಡಾ. ಮಂಜುನಾಥ್‌ಅವರು.

ಇಷ್ಟಕ್ಕೂ ಟಿವಿ ನೋಡುವುದರಿಂದ ಹೇಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲದು ಅಂತ ಪ್ರಶ್ನೇ ಮಾಡ್ತೀರಿ, ನಿಮ್ಮ ಪ್ರಶ್ನೇಗೆ ಡಾ.. ಮಂಜುನಾಥ್ ಅವರೇ ಉತ್ತರ ಕೊಡ್ತಾರೆ, ಅದಕ್ಕೂ ಮುಂಚೆ ನೀವಿನ್ನೂ ನಮ್ಮ ಈ ಸಂಜೆ ನ್ಯೂಸ್ ಚಾನೆಲ್‌ಗೆ ಸಬ್ಸ್ಕ್ರೈಬ್ ಆಗದೇ ಇದ್ರೇ ಈ ಕೂಡಲೇ ಸಬ್ ಸ್ಕ್ರೈಬ್ ಆಗಿ, ಪಕ್ಕದಲ್ಲಿರುವ ಬೆಲ್ ಐಕಾನ್ ಕ್ಲಿಕ್ ಮಾಡೋದನ್ನು ಮರೆಯಬೇಡಿ..

ಹೌದು ವೀಕ್ಷಕರೇ ಗಂಟೆ ಗಟ್ಟಲೇ ಟೀವಿ ನೋಡುವುದು ಸಿಗರೇಟ್ ಸೇವಿಸುವುದಕ್ಕಿಂತಲೂ ಆರೋಗ್ಯಕ್ಕೆ ಹೆಚ್ಚು ಹಾನಿಕಾರ. ಒಂದು ಸಿಗರೇಟು ಸೇವನೆ ಮನುಷ್ಯನ 11ನಿಮಿಷದ ಆಯಸ್ಸು ಕಡಿಮೆ ಮಾಡಿದರೇ, ಒಂದು ಗಂಟೆ ನಿರಂತರ ಟೀವಿ ವೀಕ್ಷಣೆ 22 ನಿಮಿಷದ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಆಧುನಿಕ ಜೀವನ ಶೈಲಿ, ರೋಗಗಳು ಮತ್ತು ಹೃದಯ ವಿಜ್ಞಾನ ಕ್ಷೇತ್ರದ ಪ್ರಗತಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಮನುಷ್ಯನ ಆಯಸ್ಸು ಕುಸಿಯುತ್ತಿದೆ. ಒಬ್ಬ ವ್ಯಕ್ತಿ ಒಂದು ಸಿಗರೆಟ್ ಸೇವಿಸುವುದರಿಂದ 11 ನಿಮಿಷದ ಆಯಸ್ಸು ಕಡಿಮೆಯಾಗುತ್ತದೆ. ಅದೇ ರೀತಿ ಒಂದು ಗಂಟೆ ಬಿಡುವಿಲ್ಲದೆ ಟಿವಿ ನೋಡುತ್ತಾ ಕುಂತರೇ 22 ನಿಮಿಷ ಆಯಸ್ಸಯ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಲ್ಲಿ ಬಯಾಗಿದೆ ಎಂದು ಡಾ. ಮಂಜುನಾಥ್ ಅವರು ತಿಳಿಸಿದ್ದಾರೆ.

ಸ್ನೇಹಿತ್ರೆ ಡಾ. ಮಂಜುನಾಥ್ ಅವರ ಮಾತುಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಬದಲಾಗಿ ಈ ಕ್ಷಣದಿಂದಲೂ ನೀವು ಸೇರಿದಂತೆ ನಿಮ್ಮ ಮನೆಯಲ್ಲಿ ಮಡದೆ ಮಕ್ಕಳು ಏನಾದ್ರೂ ಟೀವಿ ವೀಕ್ಷಣೆಯನ್ನು ಖಯಾಲಿಯಾಗಿ ಮಾಡಿಕೊಂಡಿದ್ರೇ ಈ ಕೂಡಲೇ ಅವರಿಗೆ ತಿಳಿಹೇಳಿ, ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಧನ್ಯವಾದಗಳು. ಈ ವಿಡಿಯೋ ನಿಮಗೆ ಇಷ್ಟವಾಗಿದ್ರೂ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Facebook Comments

Sri Raghav

Admin