20 ವರ್ಷಗಳ ನಂತರ ಕೆಆರ್‌ಎಸ್ ನಲ್ಲಿ 100 ಅಡಿ ದಾಟಿದ ನೀರಿನ ಮಟ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

KRS-01

ಮೈಸೂರು, ಜೂ.17- ಇಪ್ಪತ್ತು ವರ್ಷಗಳ ನಂತರ ವಿಶ್ವವಿಖ್ಯಾತ ಕೆಆರ್‍ಎಸ್ ಜಲಾಶಯ 100 ಅಡಿ ನೀರನ್ನು ದಾಟಿ ತಲುಪಿದೆ. ಕೇವಲ ಹದಿನೇಳು ದಿನಗಳಲ್ಲಿ ಕೆಆರ್‍ಎಸ್ ನೀರಿನ ಮಟ್ಟ 100 ಅಡಿ ತಲುಪಿರುವುದು 20 ವರ್ಷಗಳ ದಾಖಲೆಯಾಗಿದೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ದಿನದಲ್ಲಿ 100 ಅಡಿ ನೀರು ತುಂಬಿರುವುದು ವಿಶೇಷ. ಕೆಆರ್‍ಎಸ್ ನೀರಿನ ಮಟ್ಟು 124 .80 ಅಡಿ ಇಂದಿನ ಮಟ್ಟ 100.75 ಅಡಿ, ಜಲಾಶಯಕ್ಕೆ 24424 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 453 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇಷ್ಟು ಬೇಗ ಜಲಾಶಯ ಭರ್ತಿಯಾಗುತ್ತಿರುವುದಕ್ಕೆ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಹರ್ಷ ತಂದಿದೆ.

Facebook Comments

Sri Raghav

Admin