ಪಾಕ್-ಚೀನಾದಿಂದ ಭಾರತದ 1 ಲಕ್ಷ ವೆಬ್‍ಸೈಟ್ ಹ್ಯಾಕ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.7- ಭಾರತದ ಮೇಲೆ ಸದಾ ದ್ವೇಷ ಕಾರುವ ಚೀನಾ ಮತ್ತು ಪಾಕಿಸ್ತಾನ 2015ರಿಂದ ದೇಶದ 1 ಲಕ್ಷಕ್ಕೂ ಅಧಿಕ ವೆಬ್‍ಸೈಟ್‍ಗಳಿಗೆ ಕನ್ನ ಹಾಕಿರುವ ಮಾಹಿತಿ ಬಹಿರಂಗಗೊಂಡಿದೆ. ರಾಜ್ಯಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಈ ಮಾಹಿತಿ ಒದಗಿಸಲಾಗಿದೆ.

ಚೀನಾ ಮತ್ತು ಪಾಕಿಸ್ತಾನ 1,29,747 ವೆಬ್‍ಸೈಟ್‍ಗಳಿಗೆ ಕನ್ನ ಹಾಕಿದೆ. ದೇಶದ ಸೈಬರ್ ಭದ್ರತೆ ಮೇಲೆ ಆಕ್ರಮಣ ನಡೆಸಿ ವ್ಯವಸ್ಥೆಯನ್ನು ಏರುಪೇರು ಮಾಡುವುದು ಇದರ ಉದ್ದೇಶವಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಈ ನಿಟ್ಟಿನಲ್ಲಿ ಸೈಬರ್ ಭದ್ರತೆಯನ್ನು ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಹೇಳಿದೆ.

ಪಾಕಿಸ್ತಾನ ಮತ್ತು ಚೀನಾ ಅಲ್ಲದೆ ಫ್ರಾನ್ಸ್, ನೆದರ್‍ಲ್ಯಾಂಡ್ಸ್, ರಷ್ಯಾ, ಸೆಬೀರಿಯಾ ಮತ್ತು ಟ್ಯುನಿಷಿಯಾ ರಾಷ್ಟ್ರಗಳು ಸಹ ಭಾರತದ ಮೇಲೆ ಸೈಬರ್ ದಾಳಿ ನಡೆಸಿವೆ ಎಂದು ಸರ್ಕಾರ ತಿಳಿಸಿದೆ.

Facebook Comments