ವೀಕೆಂಡ್ ಕರ್ಫ್ಯೂ-ಸಂಕ್ರಾಂತಿ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14-ಕೋವಿಡ್ ಹರಡುವಿಕೆಯನ್ನು ತಡೆಯಲು ಜಾರಿಗೆ ತಂದಿರುವ ವೀಕೆಂಡ್ ಕಫ್ರ್ಯೂ ಜೊತೆಗೆ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಾವಿರಾರು ಮಂದಿ ಬೆಂಗಳೂರು ತೊರೆದು ತಮ್ಮ ಊರುಗಳತ್ತ ತೆರಳಿದ್ದಾರೆ.

ಜನ ರಾಜ್ಯ ರಾಜಧಾನಿಯಿಂದ ಬಸ್ ಹಾಗೂ ಇತರೆ ವಾಹನಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ಹೋಗಲು ಮುಂದಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರ ಹೊಸಕೋಟೆ ಟೋಲ್‍ನಲ್ಲಿ ಭಾರೀ ವಾಹನಗಳ ಜಮಾವಣೆ ಆಗಿತ್ತು. ಟೋಲ್ ಗೇಟ್‍ನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ರಾತ್ರಿ 10 ಗಂಟೆಯಾದರೂ ರಸ್ತೆಯುದ್ದಕ್ಕೂ ವಾಹನಗಳು ನಿಂತ್ತಿದ್ದ ದೃಶ್ಯ ಕಂಡುಬಂತು. ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಚೆನ್ನೆ ೈಗೆ ಸಂಪರ್ಕದ ಕೊಂಡಿಯಾಗಿರುವ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಜೆಯಿಂದಲೇ ಟೋಲ್ ಗೇಟ್ ಬಳಿ ಸಾಕಷ್ಟು ಪ್ರಮಾಣದಲ್ಲಿ ಸಾಲುಗಟ್ಟಿ ನಿಂತಿದ್ದವು.

ನಗರದಲ್ಲಿ ಕೋವಿಡ್ ಅಬ್ಬರಿಸುತ್ತಿದ್ದು, ಹಬ್ಬದ ಹೆಸರಿನಲ್ಲಿ ಜನರು ನಗರ ತೊರೆಯುತ್ತಿರುವುದರಿಂದ ಹಳ್ಳಿಗಳು ಹಾಗೂ ಹೊರ ರಾಜ್ಯಗಳಲ್ಲೂ ಕೊರೊನಾ ಸೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಬಸ್ ನಿಲ್ದಾಣದಲ್ಲಿ ಜನಜಂಗುಳಿ: ಸಂಕ್ರಾಂತಿ ಹಬ್ಬ ಮತ್ತು ಎರಡನೇ ವಾರದ ವಿಕೇಂಡ್ ಕಫ್ರ್ಯೂ ಜಾರಿ ಇರುವ ಕಾರಣ ತಮ್ಮ ಊರುಗಳಿಗೆ ತೆರಲು ಪ್ರಯಾಣಿಕರು ಐಟಿಐ, ಕೆ.ಆರ್.ಪುರ ಮತ್ತು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡು ಕಡೆ ತೆರಳಲು ನೂರಾರು ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದರು. ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಕರು ತುಂಬಿರುವ ದೃಶ್ಯ ಕಂಡು ಬಂತು. ಈ ವೇಳೆ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದರು.

Facebook Comments