‘ತೂಕ’ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಸಲಹೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬಹಳಷ್ಟು ಜನ ತೂಕ ಕಳೆದುಕೊಲ್ಲುವುದರ ಬಗ್ಗೆ ಹಲಬುವುದನ್ನು ನಾವು ನಿತ್ಯವೂ ನೋಡುತ್ತೇವೆ. ಆದರೆ ತೂಕ ಹೆಛಿಚಿಸಿಕೊಳಲ್ಲು ಆಸೆ ಪಡುವ ಅನೇಕ ಜನರು ಸಹ ನಮ್ಮ ನಡುವೆ ಇದ್ದಾರೆ. ಕೃಶ ಶರೀರ ಅನೇಕ ಕಾರಣಗಳಿಂದ ಹಾಗಾಗಿರಬಹುದು. ಪೌಶ್ತಿಕಮ್ಶಗಳ ಕೊರತೆ ಅದರಲ್ಲಿ ಪ್ರಮುಖವಾದದ್ದು. ನಿಮ್ಮ ಎತ್ತರಕ್ಕೆ ತಕ್ಕುದಾದ ತೂಕ ನಿಮ್ಮದಲ್ಲದಿದ್ದಾರೆ ನೀವು ಕೂಡಲೇ ಅದನ್ನು ಪರೀಕ್ಷಿಸಿಕೊಳ್ಳಬೇಕು. ಇದು ಯಾವುದೋ ಗುಪ್ತ ಕಾಯಿಲೆಯ ಲಕ್ಷಣವಾಗಿರಬಹುದು.

#ತೂಕ ಹೆಚ್ಚಳಕ್ಕೆ ಪೋಷಕಾಂಶವುಳ್ಳ ಆಹಾರ: ತೂಕ ಹೆಚ್ಚಿಸಿಕೊಳ್ಳಬೇಕೆಂದರೆ ಆಗ ನೀವು ಟ್ರಾನ್ಸ್ ಫ್ಯಾಟ್ ಹೆಚ್ಚಾಗಿರುವಂತಹ ಆಹಾರವನ್ನು ಸೇವಿಸಬೇಕು ಎಂದೇನಿಲ್ಲ. ನೀವು ಕೆಲವೊಂದು ಪೋಷಕಾಂಶಗಳು ಇರುವಂತಹ ಆಹಾರವನ್ನು ಸೇವಿಸಿದರೆ ಆಗ ತೂಕ ಹೆಚ್ಚಿಸಬಹುದು.

ಇದು ತೂಕ ಕಳೆದುಕೊಳ್ಳುವಂತಹ ಜನರಿಗೂ ಅನ್ವಯವಾಗುವುದು. ಕ್ಯಾಲರಿ ಅಧಿಕವಾಗಿ ಇರುವಂತಹ ಆಹಾರಗಳತ್ತ ಗಮನಹರಿಸಬೇಕು.
ಕಾಳುಗಳು, ಬೀಜಗಳು, ಕಡಲೆಬೀಜದ ಬೆಣ್ಣೆ,  ಪಿಷ್ಠವಿರುವ ತರಕಾರಿಗಳು,  ಕೊಬ್ಬು ಕಡಿಮೆ ಇರುವ ಹಾಲಿನ ಉತ್ಪನ್ನಗಳು,  ಮೊಟ್ಟೆ

#ಪೋಷಕಾಂಶಗಳು ಇರುವ ಪಾನೀಯಗಳನ್ನು ಸೇರಿಸಿ : ನಿಮ್ಮ ಆಹಾರದಂತೆ ಪಾನೀಯಗಳು ಕೂಡ ಅಧಿಕ ಕ್ಯಾಲರಿ ಹೊಂದಿರಬೇಕು. ಆದರೆ ಇವುಗಳಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ಹಾನಿ ಆಗಬಾರದು ಎಂದು ನೆನಪಿನಲ್ಲಿ ಇಟ್ಟುಕೊಳ್ಳಿ. ಇದರಿಂದ ನೀವು ಆರೋಗ್ಯಕಾರಿ ಕ್ಯಾಲರಿ ಇರುವಂತಹ ಪಾನೀಯಗಳನ್ನು ಆಯ್ಕೆ ಮಾಡಿಕೊಳ್ಳಿ. ಈ ರೀತಿಯ ಪಾನೀಯಗಳನ್ನು ಕಡೆಗಣಿಸಿ. ಪ್ಯಾಕ್ ಮಾಡಿರುವಂತಹ ಹಣ್ಣುಗಳ ಜ್ಯೂಸ್. ಇದರಲ್ಲಿ ಅಧಿಕ ಸಕ್ಕರೆ ಇರುವುದು. ಕೋಲಾ,  ಸುವಾಸಿತ ಕಾಫಿ ಪಾನೀಯಗಳು,  ಸಿಹಿ ಇರುವ ಚಾ ಇತ್ಯಾದಿಗಳು

ಈ ಎಲ್ಲಾ ಪಾನೀಯಗಳು ಕ್ಯಾಲರಿ ಅಧಿಕವಾಗಿರಬಹುದು. ಆದರೆ ಇದರಲ್ಲಿ ಕೆಲವೊಂದು ಅನಾರೋಗ್ಯಕರ ಕೊಬ್ಬು ಇದೆ. ಇದನ್ನು ಸೇವನೆ ಮಾಡುವ ಬದಲಿಗೆ ನೀವು ತಾಜಾ ಹಣ್ಣಿನ ಜ್ಯೂಸ್ ಸೇವಿಸಿ.

#ಬೀನ್ಸ್ ಮತ್ತು ಇಡೀ ಧಾನ್ಯಗಳು : ತೂಕ ಹೆಚ್ಚಿಸಿಕೊಳ್ಳಬೇಕು ಎಂದಿದ್ದರೆ ಆಗ ನೀವು ಬೇಕಿದ್ದ ಹಾಗೆ ತಿನ್ನಬಹುದು. ಆದರೆ ಈ ವೇಳೆ ಕೆಲವು ಆಹಾರಗಳನ್ನು ಕಡೆಗಣಿಸಬೇಕು. ಇದರಲ್ಲಿ ಮುಖ್ಯವಾಗಿ ಬರ್ಗರ್, ಚೀಸ್ ಕೇಕ್, ಬಟಾಟೆ ಫ್ರೈ, ಈರುಳ್ಳಿ ರಿಂಗ್, ಕ್ಯಾಂಡಿ, ಬಿಸಿ ಫಡ್ಜ್ ಮತ್ತು ಸಂಡೀಸ್ ಈ ಎಲ್ಲಾ ಆಹಾರಗಳು ನಿಮ್ಮ ತೂಕ ಹೆಚ್ಚು ಮಾಡಬಹುದು. ಆದರೆ ಇದು ಆರೋಗ್ಯಕ್ಕೆ ಹಾನಿ ಉಂಟು ಮಾಡುವುದು. ಇದರಿಂದ ನೀವು ತೂಕ ಹೆಚ್ಚಿಸಿಕೊಳ್ಳುವ ವೇಳೆ ಆರೋಗ್ಯದ ಕಡೆ ಗಮನಹರಿಸಬೇಕು.

#ವ್ಯಾಯಾಮ: ತೂಕ ಇಳಿಸಿಕೊಳ್ಳುವ ವೇಳೆ ಮಾತ್ರ ವ್ಯಾಯಾಮ ಮಾಡಬೇಕು ಎಂದು ನೀವು ಭಾವಿಸಿದ್ದೀರಾ? ಹಾಗಾದರೆ ನೀವು ಖಂಡಿತವಾಗಿಯೂ ತಪ್ಪು ಕಲ್ಪನೆ ಇಟ್ಟುಕೊಂಡಿದ್ದೀರಿ. ನೀವು ತೂಕ ಹೆಚ್ಚಿಸಿಕೊಳ್ಳಬೇಕಾದರೆ ಆಗ ನೀವು ಸ್ನಾಯುಗಳನ್ನು ಬಲಿಷ್ಠಗೊಳಿಸಲು ಹೆಚ್ಚು ಕ್ಯಾಲರಿ ತಿನ್ನುವ ಜತೆಗೆ ವ್ಯಾಯಾಮ ಕೂಡ ಮಾಡಬೇಕು. ಇಲ್ಲಿ ಕೆಲವೊಂದು ವ್ಯಾಯಾಮಗಳನ್ನು ಸೂಚಿಸಲಾಗಿದೆ. ಟ್ವಿಸ್ಟ್ ಕರ್ಲ್ಸ್, ಸ್ಕ್ವಾಟ್ಸ್, ಡಿಪ್ಸ್, ಡೆಡ್ ಲಿಫ್ಟ್ ಇತ್ಯಾದಿಗಳು.

#ಆಹಾರ ಸೇವನೆ ದ್ವಿಗುಣಗೊಳಿಸಿ: ಇದು ತುಂಬಾ ಖುಷಿ ನೀಡಬಹುದು. ಆದರೆ ಅಷ್ಟು ಸುಲಭದ ವಿಚಾರವಲ್ಲ. ನೀವು ಇದಕ್ಕೆ ಮೊದಲು ದಿನಕ್ಕೆ ಮೂರು ಸಲ ಊಟ ಮಾಡುತ್ತಿದ್ದರೆ, ಇದರ ಪ್ರಮಾಣವನ್ನು ಹೆಚ್ಚಿಸಿ ಆರು ಸಲ ಊಟ ಮಾಡಬೇಕು. ಅದು ಕೂಡ ಪ್ರತೀ ಸಲ ಸಮಾನ ಪ್ರಮಾಣದ ಆಹಾರ ಸೇವಿಸಬೇಕು. ಕೆಲವು ವಾರಗಳ ಕಾಲ ನೀವು ಹೆಚ್ಚುವರಿ ಆಹಾರವನ್ನು ನಿಮ್ಮ ಮೇಲೆ ಹೇರಬೇಕು. ನೀವು ಪ್ರತಿನಿತ್ಯ 500 ಕ್ಯಾಲರಿ ಹೆಚ್ಚು ಸೇವನೆ ಮಾಡಿದರೆ ಆಗ ಒಂದು ವಾರದಲ್ಲಿ ಸುಮಾರು ಮುಕ್ಕಾಲು ಕೆಜಿ ಹೆಚ್ಚಿಸಿಕೊಳ್ಳಬಹುದು.

#ದೈನಂದಿನ ಕ್ಯಾಲರಿ ಅಗತ್ಯತೆ ಲೆಕ್ಕ ಹಾಕಿಕೊಳ್ಳಿ: ಪ್ರತಿಯೊಬ್ಬ ವ್ಯಕ್ತಿಯು ತುಂಬಾ ಭಿನ್ನವಾಗಿರುವರು ಮತ್ತು ಇದರಿಂದಾಗಿ ಅವರ ಕ್ಯಾಲರಿ ಅಗತ್ಯತೆ ಕೂಡ ಬೇರೆ ಬೇರೆಯಾಗಿರುವುದು. ಇದಕ್ಕಾಗಿ ಪ್ರತಿನಿತ್ಯ ದೇಹಕ್ಕೆ ಎಷ್ಟು ಮಟ್ಟದ ಕ್ಯಾಲರಿ ಬೇಕು ಎಂದು ಸರಿಯಾಗಿ ಲೆಕ್ಕ ಹಾಕಿಕೊಳ್ಳಬೇಕು. ಇದನ್ನು ಸರಿಯಾಗಿ ತಿಳಿದುಕೊಂಡರೆ ಆಗ ಕ್ಯಾಲರಿ ಸೇವನೆ ಹಚ್ಚಿಸಬಹುದು.

ಪ್ರತಿನಿತ್ಯ ಸೇವಿಸುವಂತಹ ಕ್ಯಾಲರಿಗೆ ಹೆಚ್ಚವರಿಯಾಗಿ ಇನ್ನು 500 ಕ್ಯಾಲರಿ ಸೇವಿಸಬೇಕು. ಈ ಅಧಿಕ ಕ್ಯಾಲರಿ ಆಹಾರದಿಂದ ಒಂದು ವಾರದಲ್ಲಿ ನೀವು ದೇಹದ ತೂಕ ಹೆಚ್ಚು ಮಾಡಬಹುದು. ಇದೇ ವೇಳೆ ದಿನದಲ್ಲಿ ನೀವು ಆಹಾರ ಸೇವನೆಗೆ ಒಂದು ವೇಳಾಪಟ್ಟಿಯನ್ನು ತಯಾರಿಸಿಕೊಂಡರೆ ಆಗ ಕ್ಯಾಲರಿ ಸೇವನೆ ಲೆಕ್ಕ ಹಾಕುವುದು ಸುಲಭವಾಗುವುದು.

 

Facebook Comments