ರಜೆ ಮುಗಿಸಿ ಶಾಲೆಗೆ ಮರಳಿದ ವಿದ್ಯಾರ್ಥಿಗಳಿಗೆ ತಿಲಕವಿಟ್ಟು, ಸಿಹಿ ತಿನಿಸಿ ಸ್ವಾಗತ ..!

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಮೇ 21- ರಜಾ-ಮಜಾ, ಅಜ್ಜಿ ಊರು, ಜಾತ್ರೆ, ಉತ್ಸವ, ಪ್ರವಾಸ ಹೀಗೆ ಕಳೆದ ಎರಡು ತಿಂಗಳಿಂದ ಶಾಲಾ ರಜಾದಿನಗಳನ್ನ್ನು ಎಂಜಾಯ್ ಮಾಡುವ ಮೂಲಕ ಕಳೆದ ವಿದ್ಯಾರ್ಥಿಗಳು ಶಾಲೆ ಕಡೆಗೆ ಒಲ್ಲದ ಮನಸ್ಸಿನಿಂದಲೇ ಮುಖ ಮಾಡಿದ ವಿದ್ಯಾರ್ಥಿಗಳಿಗೆ ನಗರದ ಆದಿಚುಂಚನಗಿರಿ ಆಂಗ್ಲಶಾಲೆ ಆಡಳಿತ ಮಂಡಳಿ ಅಣೆಗೆ ತಿಲಕ ಇಟ್ಟು ಸಿಹಿ ತಿನ್ನಿಸಿ ವಿದ್ಯಾರ್ಥಿಗಳನ್ನು ವಿಶೇಷವಾಗಿ ಬರಮಾಡಿಕೊಂಡಿದ್ದು ಗಮನ ಸೆಳೆಯಿತು.

ರಜೆಯ ಗುಂಗಿನಲ್ಲಿದ್ದ ಪುಟಾಣಿ ವಿದ್ಯಾರ್ಥಿಗಳು ಬಾರದ ಮನಸ್ಸಿನಿಂದಲೇ ಶಾಲೆಯತ್ತ ಹೆಜ್ಜೆ ಹಾಕುತ್ತಾ ಬಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ದ್ವಾರದಲ್ಲಿ ಕಟ್ಟಲಾಗಿದ್ದ ತಳಿಲು ತೋರಣಗಳು ಸ್ವಾಗತಿಸಿದರೆ ನೆಚ್ಚಿನ ಶಿಕ್ಷಕಿಯರು ವಿದ್ಯಾರ್ಥಿಗಳ ಬಾಯಿಗೆ ಸಿಹಿ ತಿನ್ನಿಸಿ ಕೈಹಿಡಿದು ಶಾಲಾ ಕೊಠಡಿಗೆ ಕರೆದೊಯ್ಯುತ್ತಿದ್ದದ್ದು ಮಕ್ಕಳ ಮನಸ್ಸಿನಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣವಾಯಿತು.

ಶಾಲಾ ಅಧ್ಯಾಪಕ ವೃಂದವೇ ವಿಶೇಷವಾಗಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಗಣಪತಿ ಪೂಜೆಯ ಮೂಲಕ 2019-20 ನೇ ಸಾಲಿನ ಶೈಕ್ಷಣಿಕ ವರ್ಷವನ್ನ ಆರಂಭಿಸಿದ್ದ ಕಂಡ ಪೋಷಕರ ವಲಯದಲ್ಲೂ ಸಹ ಅಚ್ಚರಿಗೆ ಕಾರಣವಾಯಿತಲ್ಲದೇ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಈ ವಿನೂತ ಕಾರ್ಯಕ್ರಮವನ್ನ ಕುರಿತು ಮೆಚ್ಚಿಗೆಯನ್ನು ಸಹ ವ್ಯಕ್ತಪಡಿಸಿದರು.

ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಮೋಹನ್‍ಕುಮಾರ್ , ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಮತ್ತಿತರರು ಹಾಜರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin