ಯುವತಿ ಸೇರಿದಂತೆ ಮೂವರು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಜೂ.10- ಸತ್ತೇಗಾಲ ವೆಸ್ಲಿ ಸೇತುವೆ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಯುವತಿ ಸೇರಿದಂತೆ ಮೂರು ಮಂದಿ ಸಾವಿಗೀಡಾಗಿದ್ದಾರೆ.
ಬೆಂಗಳೂರಿನ ಸುಂಕದಕಟ್ಟೆಯ ಮನೋಜ್‍ಕುಮಾರ್(23) ಈತ ಎಂ.ಎ ಪದವಿ ವ್ಯಾಸಂಗ ಮಾಡುತ್ತಿದ್ದ,

ಮಾಗಡಿ ತಾಲ್ಲೂಕಿನ ಕೊತ್ತೇಗಾಲಹಳ್ಳಿಯ ಲೋಕೇಶ್(21) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಕುಣಿಗಲ್ ತಾಲ್ಲೂಕಿನ ವೀಣಾ(23) ಫೈನಾನ್ಸ್ ಕಂಪನಿಯಲ್ಲಿಕೆಲಸ ನಿರ್ವಹಿಸುತ್ತಿದ್ದ ಇವರೆಲ್ಲರೂ ತಲಕಾಡು ಬಳಿ ಇರುವ ಮುಡುಕುತೊರೆಯಲ್ಲಿ ಸ್ನೇಹಿತರ ಮದುವೆ ಮುಗಿಸಿ ಪ್ರವಾಸಿ ಕೇಂದ್ರವಾದ ಭರಚುಕ್ಕಿ ವೀಕ್ಷಿಸಲು ಬಂದು ಈ ದುರುಂತಕ್ಕೆ ಇಡಾಗಿದ್ದಾರೆ.

ಮೊದಲು ವೀಣಾ ನೀರಿಗಿಳಿದ್ದು ಕಾಲು ಜಾರಿ ಕೊಚ್ಚಿ ಹೋಗುತ್ತಿದ್ದಾಗ ಈಕೆಯನ್ನು ಬದುಕಿಸಲು ಯತ್ನಿಸಿದ ಮನೋಜ್‍ಕುಮಾರ್ ಹಾಗೂ ಲೋಕೇಶ್ ಸಹ ನೀರು ಪಾಲಾಗಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ತಂದು ಇರಿಸಿದ್ದಾರೆ. ಪೊಲೀಸರು ಮೃತರ ಕುಟುಂಬಕ್ಕೆ ವಿಷಯವನ್ನು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ