ಯುವತಿ ಮೇಲೆ ಹಲ್ಲೆ: ಪಶ್ಚಿಮ ಬಂಗಾಳ ಮೂಲದ ಯುವಕ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ಲಾಂಗ್‍ಫೋರ್ಡ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಮೇಲೆ ಹಲ್ಲೆ ನಡೆಸಿದ ಪಶ್ಚಿಮ ಬಂಗಾಳ ಮೂಲದ ಯುವಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೆ.12ರಂದು 22 ವರ್ಷದ ಯುವತಿ ಈ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಆರೋಪಿ ಮೊಬೈಲ್ ನೋಡಿಕೊಂಡು ಹೋಗುತ್ತ ಆಕೆಗೆ ತಾಗಿಸಿದ್ದಾನೆ.

ಇದರಿಂದ ಕೋಪಗೊಂಡ ಯುವತಿ ಆತನೊಂದಿಗೆ ಜಗಳವಾಡಿದಾಗ ಆರೋಪಿ ಹಲ್ಲೆ ಮಾಡಿದ್ದಾನೆ. ಈ ಸಂಬಂಧ ಯುವತಿ ನೀಡಿದ ದೂರಿನನ್ವಯ ಅಶೋಕನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Facebook Comments