ವಾರ್ಷಿಕ 8 ಲಕ್ಷ ರೂ. ಒಳಗಿನ ಆದಾಯದ ಕುಟುಂಬಗಳಿಗೂ ಮೀಸಲಾತಿ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ,ಜು.16- ವಾರ್ಷಿಕ ಒಟ್ಟು ಆದಾಯ ಎಂಟು ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ಹುದ್ದೆ ಮತ್ತು ಇತರೆ ನಾಗರಿಕ ಸೇವೆಗಳಲ್ಲಿ ಆದ್ಯತೆ ಮೇರೆಗೆ ಮೀಸಲಾತಿ ಪ್ರಯೋಜನವನ್ನು ಪಡೆಯಬಹುದು ಎಂಬ ಮಹತ್ವದ ಅಧಿಸೂಚನೆಯನ್ನು ಪಶ್ಚಿಮ ಬಂಗಾಳದ ಸರ್ಕಾರ ಹೊರಡಿಸಿದೆ.

ಮೀಸಲಾತಿ ಯೋಜನೆಯಡಿ ಬರದ ಪರಿಶಿಷ್ಟ ಜಾತಿ, ಪಂಗಡ, ಮತ್ತು ಇತರ ಹಿಂದುಳಿದ ವರ್ಗಗಳ ಜನರಿಗೆ ನಾಗರಿಕ ಹುದ್ದೆ ಮತ್ತು ಸೇವೆಗಳ ನೇಮಕಾತಿಯಲ್ಲಿ ಶೇ.10ರಷ್ಟು ಹಾಗೂ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಮೇರೆಗೆ ಪ್ರವೇಶ ಪಡೆಯಬಹುದೆಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕುಟುಂಬದ ಒಟ್ಟು ಆದಾಯ ವಾರ್ಷಿಕ 8 ಲಕ್ಷದೊಳಗಿದ್ದು, ಕೃಷಿ, ವ್ಯವಹಾರ, ವೃತ್ತಿ ಸೇರಿದಂತೆ ಎಲ್ಲ ಮೂಲಗಳಿಂದ ಬರುವ ವರಮಾನವು ಅರ್ಜಿ ಸಲ್ಲಿಸುವ ವರ್ಷಕ್ಕಿಂತ ಹಿಂದಿನ ಹಣಕಾಸು ವರ್ಷದ ಒಳಗಿನ ಮಾಹಿತಿಯನ್ನು ಈ ಮೀಸಲಾತಿಗೆ ಪರಿಗಣಿಸಲಾಗುವುದು ಎಂದು ಸೂಚಿಸಿದೆ.

ಈ ಬಗ್ಗೆ ಜು.9ರಂದು ಅಧಿಸೂಚನೆ ಹೊರಡಿಸಿದ 6 ದಿನಗಳ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ , ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ (ಇಡಬ್ಲುಎಸ್) ಸಾಮಾನ್ಯ ವಿಭಾಗಗಳಲ್ಲಿಗೂ ಶೇ.10 ಮೀಸಲಾತಿಯನ್ನು ಪಡೆಯಹುದು ಎಂದು ಸೂಚಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಸಾಮಾನ್ಯ ವರ್ಗದವರಿಗೆ ಶೇ. 10 ಮೀಸಲಾತಿ ನೀಡಿದ ಆರು ತಿಂಗಳ ನಂತರ ಪಶ್ಚಿಮ ಬಂಗಾಳ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಐದು ಎಕರೆ ಕೃಷಿ ಭೂಮಿಯನ್ನು ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿರುವ ಕುಟುಂಬವು ಇಲ್ಲವೇ 1,000 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟ ವಸತಿ ನಿವೇಶನವನ್ನು ಹೊಂದಿರುವ ವ್ಯಕ್ತಿಯು ಮೀಸಲಾತಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದರಿಂದ ಆರ್ಥಿಕವಾಗಿ ಹಿಂದುಳಿದ ಒಂದೇ ಕುಟುಂಬದ ಸದಸ್ಯರು ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಸ್ಥಿತಿಗತಿಯನ್ನು ಅರಿತು ಅವರ ಆಸ್ತಿಯನ್ನು ಒಟ್ಟಿಗೆ ಸೇರಿಸಿ ಮೀಸಲಾತಿಗೆ ಮಾನದಂಡವಾಗಿ ಅನುಸರಿಸಲಾಗುವುದು. ಎಂದು ಹೇಳಲಾಗಿದೆ.

Facebook Comments