ಸೋತವರ ನಡುವೆ ಕದನ, ಪುಟಿದೇಳುವರೇ ಹಾಲಿ ಚಾಂಪಿಯನ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ,ಅ.26- ಟ್ವೆಂಟಿ- 20 ಸ್ಪೆಷಾಲಿಸ್ಟ್ ಆಟಗಾರರಾದ ಕ್ರಿಸ್‍ಗೇಲ್, ಕಿರಾನ್ ಪೋಲಾರ್ಡ್ , ಆ್ಯಂಡ್ರೂ ರಸಲ್, ಲಿಂಡ್ಲೆ ಸಿಮನ್ಸ್‍ರಂತಹ ಘಟಾನುಘಟಿ ಬ್ಯಾಟ್ಸ್‍ಮನ್‍ಗಳನ್ನು ಹೊಂದಿದ್ದರೂ ಕೂಡ ಕಳೆದ ಪಂದ್ಯದಲ್ಲಿ ಏಕದಿನ ವಿಶ್ವಚಾಂಪಿಯನ್ ಆಗಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 55 ರನ್‍ಗಳಿಗೆ ಸರ್ವಪತನ ಕಂಡು ನಂತರ ಹೀನಾಯವಾಗಿ ಸೋಲು ಕಂಡಿರುವ ಹಾಲಿ ಚುಟುಕು ವಿಶ್ವಕಪ್ ಚಾಂಪಿಯನ್ ವೆಸ್ಟ್‍ಇಂಡೀಸ್ ತಂಡವು ಇಂದು ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ವಿಶ್ವಕಪ್‍ನ ಚೋಕರ್ಸ್ ಎಂದೇ ಬಂಬಿಸಿಕೊಂಡಿರುವ
ದಕ್ಷಿಣ ಆಫ್ರಿಕಾ ವಿರುದ್ಧದ ಸವಾಲನ್ನು ಎದುರಿಸಲಿದೆ.

ದಕ್ಷಿಣ ಆಫ್ರಿಕಾದ ಸ್ಥಿತಿಯೂ ಭಿನ್ನವಾಗಿಲ್ಲ ಡಿ ಕಾಕ್, ಡೇವಿಡ್ ಮಿಲ್ಲರ್, ಅದಿಲ್ ಮಕ್ರಂರಂತಹ ಟ್ವೆಂಟಿ-20 ಸ್ಪೆಷಾಲಿಸ್ಟ್ ಬ್ಯಾಟ್ಸ್‍ಮನ್‍ಗಳು, ಚುಟುಕು ಮಾದರಿ ಕ್ರಿಕೆಟ್‍ನ ನಂಬರ್ 1 ಬೌಲರ್ ತರ್ಬೆಜ್ ಶಾಂಸಿ, ವಿಶ್ವ ಶ್ರೇಷ್ಠ ವೇಗಿಗಳಾದ ಕಸಗೊ ರಬಾಡ, ಎರ್ನಿಚ್ ನೋರ್ಟಜೆ, ನಿಗಡಿರಂತಹ ಬೌಲರ್‍ಗಳ ಬಲವನ್ನು ಹೊಂದಿದ್ದರೂ ಕೂಡ ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಟೆಂಬಾ ಬುವಾಮ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡ ಪೋಲಾರ್ಡ್ ನಾಯಕತ್ವದ ವೆಸ್ಟ್‍ಇಂಡೀಸ್ ವಿರುದ್ಧ ಗೆಲುವು ಸಾಸಲು ರಣತಂತ್ರವನ್ನು ರೂಪಿಸಿದೆ.

ಚುಟುಕು ವಿಶ್ವಕಪ್‍ನಲ್ಲಿ ಬಲಾಬಲ:
ಪಂದ್ಯ: 3, ದಕ್ಷಿಣ ಆಫ್ರಿಕಾ- 2 ಗೆಲುವು, ವೆಸ್ಟ್‍ಇಂಡೀಸ್- 1 ಗೆಲುವು
ಅತಿ ಹೆಚ್ಚು ರನ್:
ಕ್ರಿಸ್‍ಗೇಲ್- ವೆಸ್ಟ್ ಇಂಡೀಸ್- 363 ರನ್
ಡಿ ಕಾಕ್- ದಕ್ಷಿಣ ಆಫ್ರಿಕಾ- 302 ರನ್
ಅತ್ಯಕ ರನ್:
ಡು ಪ್ಲೆಸಿಸ್- ದ.ಆಫ್ರಿಕಾ- 119 ರನ್
ಕ್ರಿಸ್‍ಗೇಲ್- ವೆಸ್ಟ್‍ಇಂಡೀಸ್-117 ರನ್
ಅತಿ ಹೆಚ್ಚು ವಿಕೆಟ್:
ಡ್ವೇನ್ ಬ್ರಾವೋ- ವೆಸ್ಟ್‍ಇಂಡೀಸ್- 15
ಡೇವಿಡ್ ವೇಸ್- ದ.ಆಫ್ರಿಕಾ- 12 ವಿಕೆಟ್.

Facebook Comments