ವೆಸ್ಟ್ ಇಂಡೀಸ್‍ಗೆ 72 ರನ್‍ಗಳ ಸೋಲು, ಸರಣಿ ವಶಪಡಿಸಿಕೊಂಡ ನ್ಯೂಜಿಲ್ಯಾಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಮೌಂಟ್‍ಮೌಂಗನುಯಿ , ನ.29- ಅತಿಥೇಯ ಸಂಘಟಿಕ ಹೋರಾಟಕ್ಕೆ ನಲುಗಿದ ಕೆರಿಬಿಯನ್ನರು 2ನೆ ಟ್ವೆಂಟಿ-20 ಪಂದ್ಯದಲ್ಲಿ 72 ರನ್‍ಗಳಿಂದ ಸೋಲುವ ಮೂಲಕ ಸರಣಿಯನ್ನು ಕೈಚೆಲ್ಲಿದೆ. ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಸಿದ್ದ ಟೀಮ್ ಸೌಥಿ ನಾಯಕತ್ವದ ನ್ಯೂಜಿಲ್ಯಾಂಡ್ ಇನ್ನು ಒಂದು ಪಂದ್ಯ ಬಾಕಿ ಇರುವಂತೆ 2-0 ಯಿಂದ ಸರಣಿಯನ್ನು ಗೆದ್ದಿದ್ದು.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಕಿರಾನ್ ಪೋಲಾರ್ಡ್ ನಾಯಕತ್ವದ ವೆಸ್ಟ್‍ಇಂಡೀಸ್‍ನ ಬೌಲರುಗಳು ಕಿವೀಸ್ ಬ್ಯಾಟ್ಸ್‍ಮನ್‍ಗಳಿಗೆ ಲಗಾಮು ಹಾಕುವಲ್ಲಿ ಎಡವಿದ್ದರಿಂದ 238 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

ಈ ಗುರಿಯನ್ನು ಬೆನ್ನಟ್ಟಿದ ವೆಸ್ಟ್‍ಇಂಡೀಸ್ 20 ಓವರ್‍ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 166 ರನ್ ಗಳಿಸಿ 72 ರನ್‍ಗಳಿಂದ ಸೋಲು ಕಂಡಿತು.

ವೆಸ್ಟ್‍ಇಂಡೀಸ್ ಪರ ಫ್ಲೆಚರ್(20ರನ್, 2 ಸಿಕ್ಸರ್), ಶಿಮ್ರಾನ್ ಹಿಟ್ಮೇಯರ್ (25ರನ್,2 ಬೌಂಡರಿ), ಮೈಯರ್ಸ್ (20 ರನ್,2 ಸಿಕ್ಸರ್), ಪೆÇೀಲಾರ್ಡ್ (28 ರನ್, 4 ಸಿಕ್ಸರ್), ಕಿಮಾರ್ ಪೌಲ್(26 ರನ್,3 ಸಿಕ್ಸರ್) ಉತ್ತಮ ಆಟವಾಡಿದರೂ ಕಿವೀಸ್ ಬೌಲರ್‍ಗಳ ಸಂಘಟಿತ ಹೋರಾಟದಿಂದಾಗಿ ಸರಣಿಯನ್ನು ಕೈಚೆಲ್ಲಿತು.

ಕಿವೀಸ್ ಪರ ಜೆಮ್ಮಿಸನ್, ಸ್ಯಾನೇಟರ್ ತಲಾ 2 ವಿಕೆಟ್ ಕಬಳಿಸಿದರೆ, ನಾಯಕ ಟೀಮ್ ಸೌಥಿ, ಫಾಗ್ರ್ಯೂಸನ್, ಇಶ್ ಸೌ, ಜೆಮ್ಮಿ ನೀಸ್ಸಮ್ ತಲಾ 1 ವಿಕೆಟ್ ಕಬಳಿಸಿದರು.

# ಫಿಲಿಪ್ಸ್- ಕೋನ್‍ವೇನ್ ಆರ್ಭಟ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಆರಂಭದಿಂದಲೂ ಕೆರೆಬಿಯನ್ ಬೌಲರ್‍ಗಳ ಎದುರು ದಾಳಿ ನಡೆಸಿದರು. ಆರಂಭಿಕ ಆಟಗಾರರಾದ ಮಾರ್ಟಿನ್ ಗುಪ್ಟಿಲ್ (34ರನ್, 5 ಬೌಂಡರಿ, 2 ಸಿಕ್ಸರ್), ವಿಕೆಟ್ ಕೀಪರ್ ಸೈಫರ್ಟ್ (18ರನ್,3 ಬೌಂಡರಿ) ಮೊದಲ ವಿಕೆಟ್‍ಗೆ 49 ರನ್‍ಗಳ ಜೊತೆಯಾಟ ನೀಡಿ ಬೃಹತ್ ಮೊತ್ತ ದಾಖಲಿಸುವ ಸೂಚನೆ ನೀಡಿದರು.

18 ರನ್ ಗಳಿಸಿದ್ದಾಗ ಸೈಫರ್ಟ್, ಥಾಮಸ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಆದರೆ, ಗುಪ್ಟಿಲ್ 34 ರನ್ ಗಳಿಸಿ ಎಲೆನ್ ಬೌಲಿಂಗ್‍ನಲ್ಲಿ ಪೂರನ್‍ಗೆ ಕ್ಯಾಚ್ ನೀಡಿ ಹೊರ ನಡೆದಾಗ ಕಿವೀಸ್ 53 ರನ್ ಗಳಿಸಿತ್ತು.

# ಬೌಂಡರಿ- ಸಿಕ್ಸರ್‍ಗಳ ಸುರಿಮಳೆ:
ಮಾರ್ಟಿನ್ ಗುಪ್ಟಿಲ್ ಔಟಾಗುತ್ತಿದ್ದಂತೆ ಜೊತೆಗೂಡಿದ ಫಿಲಿಪ್ಸ್ ಹಾಗೂ ಕೋನ್‍ವೇಲ್ ಜೋಡಿಯು ಬೌಂಡರಿ ಹಾಗೂ ಸಿಕ್ಸರ್‍ಗಳ ಸುರಿಮಳೆ ಸುರಿಸಿದರು. ಅಂತಿಮ 5 ಓವರ್‍ಗಳಲ್ಲಿ 60ಕ್ಕೂ ಹೆಚ್ಚು ರನ್ ಸೂರಿಗೊಂಡ ಈ ಜೋಡಿಯು ತಂಡದ ಮೊತ್ತವನ್ನು 283 ರನ್‍ಗಳಿಗೆ ಹಿಗ್ಗಿಸಿದರು.

ಈ ನಡುವೆ 10 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದ ಫಿಲಿಪ್ಸ್ ಟ್ವೆಂಟಿ-20 ಪಂದ್ಯದಲ್ಲಿ ಚೊಚ್ಚಲ ಶತಕ (108ರನ್, 72 ಎಸೆತ) ಗಳಿಸಿ ಅಂತಿಮ ಓವರ್‍ನಲ್ಲಿ ಪೋಲಾರ್ಡ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರೆ, 4 ಬೌಂಡರಿ, 4 ಸಿಕ್ಸರ್ ಸಿಡಿಸಿದ ಕೋನ್‍ವೇಲ್ (65ರನ್,37 ಎಸೆತ) ಅಜೇಯರಾಗಿ ಉಳಿದರು. ಶತಕ ಗಳಿಸಿದ ಫಿಲಿಪ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

# ಕಿವೀಸ್ ಪರ ಅತಿ ಹೆಚ್ಚು ಜೊತೆಯಾಟ
ಕೆರಿಬಿಯನ್ ಬೌಲರ್‍ಗಳನ್ನು ಚೆಂಡಾಡಿದ ಕಿವೀಸ್‍ನ ಯುವ ಆಟಗಾರ ಕೊನ್‍ವೇನ್- ಫಿಲಿಪ್ಸ್ ಜೋಡಿಯು 184 ರನ್ ಗಳಿಸುವ ಮೂಲಕ ನ್ಯೂಜಿಲ್ಯಾಂಡ್ ಪರ ಯಾವುದೇ ವಿಕೆಟ್‍ಗೂ ಅತಿ ಹೆಚ್ಚಿನ ಜೊತೆಯಾಟ ನೀಡಿ ದಾಖಲೆ ಬರೆದರು.

2016 ಪಾಕಿಸ್ತಾನ ವಿರುದ್ಧ ನಡೆದ ಸರಣಿಯಲ್ಲಿ ನ್ಯೂಜಿಲ್ಯಾಂಡ್‍ನ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಹಾಗೂ ನಾಯಕ ಕೇನ್ ವಿಲಿಯಮ್ಸ್ ಮೊದಲ ವಿಕೆಟ್‍ಗೆ ಅಜೇಯ 171 ರನ್ ಗಳಿಸಿದ್ದರೆ, 2012ರಲ್ಲಿ ಜಿಂಬಾಬ್ವೆ ವಿರುದ್ಧ ಗುಪ್ಟಿಲ್ ಹಾಗೂ ವಿಲಿಯಮ್ಸ್ 3ನೇ ವಿಕೆಟ್ 137 ರನ್‍ಗಳ ಜೊತೆಯಾಟ ನೀಡಿದ್ದರು. ಈ ದಾಖಲೆಯನ್ನು ವೆಸ್ಟ್‍ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೊನ್‍ವೇನ್- ಫಿಲಿಪ್ಸ್ ಜೋಡಿ ಮುರಿದು ಹಾಕಿದರು.

# 3ನೇ ವಿಕೆಟ್ ದಾಖಲೆ :
ಕೊನ್‍ವೇನ್ ಹಾಗೂ ಫಿಲಿಪ್ಸ್ ಅವರು ವೆಸ್ಟ್ ಇಂಡೀಸ್ ವಿರುದ್ಧ 3ನೇ ವಿಕೆಟ್‍ಗೆ 183 ಜೊತೆಯಾಟ ನೀಡುವ ಮೂಲಕ ನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಚುಟುಕು ಕ್ರಿಕೆಟ್‍ನಲ್ಲಿ ಈ ಹಿಂದೆ ಇಂಗ್ಲೆಂಡ್‍ನ ನಾಯಕ ಮಾರ್ಗನ್ ಹಾಗೂ ಮಾಲನ್ ಅವರು 2019ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಿರ್ಮಿಸಿದ್ದ 182 ರನ್‍ಗಳ ಜೊತೆಯಾಟವನ್ನು ಮುರಿದು ಹಾಕಿದರು. ಇದಕ್ಕೂ ಮುನ್ನ 2014 ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‍ನ ಹಾಲ್ಸ್ ಹಾಗೂ ಮೊರ್ಗಾನ್ 152 ರನ್ ಗಳಿಸಿದ್ದಾರೆ.

Facebook Comments

Sri Raghav

Admin