ಭಾರತ ವಿರುದ್ಧ ಟ್ವೆಂಟಿ-20 ಪಂದ್ಯಕ್ಕೆ ವಿಂಡೀಸ್ ತಂಡ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಫ್ಲೋರಿಡಾ, ಜು.23- ಭಾರತ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ವಿಂಡೀಸ್ ತಂಡ ಪ್ರಕಟಗೊಂಡಿದೆ.  ವಿಶ್ವಕಪ್‍ನಿಂದ ಹೊರಗುಳಿದಿದ್ದ ಖ್ಯಾತ ಸ್ಪಿನ್ನರ್ ಸುನೀಲ್ ನರೇನ್, ಅಲ್‍ರೌಂಡರ್ ಕಿರಾನ್ ಫೋಲಾರ್ಡ್, ವಿಶ್ವಕಪ್‍ನ ವೇಳೆ ಗಾಯಗೊಂಡಿದ್ದ ಆ್ಯಂಡ್ರೂ ರಸೂಲ್ ಅವರು ತಂಡವನ್ನು ಕೂಡಿಕೊಂಡಿದ್ದು ಕಾರ್ಲೋಸ್ ಬಾರ್ತ್‍ವೇಟ್ ತಂಡವನ್ನು ಮುನ್ನಡೆಸಲಿದ್ದಾರೆ.

ಮುಂಬರುವ ಚುಟುಕು ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಪೂರ್ವ ತಯಾರಿ ನಡೆಸಿರುವ ವಿಂಡೀಸ್ ಕ್ರಿಕೆಟ್ ಮಂಡಳಿಯು ಭಾರತ ವಿರುದ್ಧ ನಡೆಯಲಿರುವ ಚುಟುಕು ಕ್ರಿಕೆಟ್ ಸರಣಿಗೆ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ.

ಆಗಸ್ಟ್ 3 ರಂದು ವೆಸ್ಟ್‍ಇಂಡೀಸ್ ತಂಡವು ತನ್ನ ಮೊದಲ ಪಂದ್ಯವನ್ನು ಫ್ಲೋರಿಡಾದಲ್ಲಿ ಭಾರತ ತಂಡವನ್ನು ಎದುರಿಸಲಿದೆ. ತಂಡದ ವಿವರ: ಕಾರ್ಲಸ್ ಬರ್ತ್‍ವೇಟ್ (ನಾಯಕ), ಆಂಡೋನಿ ಬ್ರಾಮ್‍ಲೇ, ಜಾನ್ ಕ್ಯಾಂಪಲ್,

ಶೆಲ್ಡನ್ ಕಾರ್ಟಲ್, ಶಿಮ್ರಾನ್ ಹೇಟ್ಮೇರ್, ಇವಿನ್ ಲಿವೀಸ್, ಸುನೀಲ್ ನರೇನ್, ಕೀಮೋ ಪಾಲ್, ಕ್ಯಾರೇ ಪಿರ್ರೇ, ಕಿಲೋನ್ ಫೋಲಾರ್ಡ್, ನಿಕೋಲಸ್ ಪೂರನ್, ರೋವ್‍ಮೆನ್ ಪೊವೆಲ್, ಆ್ಯಂಡ್ರೆ ರಸೂಲ್, ಓಸಾನೆ ಥಾಮಸ್.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ