ಮಂಗಳೂರು ಕಡಲ ಕಿನಾರೆಯಲ್ಲಿ 4.3 ಮೀ ಉದ್ದದ ತಿಮಿಂಗಲ ಮೃತದೇಹ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜೂ.30- ಇಲ್ಲಿನ ಸೂರತ್‍ಕಲ್‍ನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ (ಎನ್‍ಐಟಿಕೆ) ಮತ್ತು ಪ್ರಸಿದ್ಧ ಸದಾಶಿವ ದೇಗುಲದ ಬಳಿ ಮುಖ್ಕ ಕಡಲ ಕಿನಾರೆಗೆ 4.3 ಮೀಟರ್‍ಗಳಷ್ಟು ಉದ್ದದ ತಿಮಿಂಗಲ ಶಾರ್ಕ್ ಪತ್ತೆಯಾಗಿದೆ.

ಈ ಬೃಹತ್ ಜಲಚರ ಸಾಗರದಲ್ಲೇ ಮೃತಪಟ್ಟಿದ್ದು , ಅಲೆಯೊಂದಿಗೆ ಕೊಚ್ಚಿಕೊಂಡು ಕಡಲ ತೀರಕ್ಕೆ ಬಿದ್ದಿದೆ ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಮೀನುಗಾರಿಕೆ ಕಾಲೇಜ್ ಪ್ರೊ.ಸೆಂಥಿಲ್ ವೇಲ್ ಮೀನುಗಾರಿಕೆ ಸಂಪನ್ಮೂಲ ಇಲಾಖೆಯ ಪ್ರೊ.ಎಚ್.ಎನ್. ಆಂಜನೇಯಪ್ಪ ಮತ್ತು ಜಲಚರ ಆರೋಗ್ಯ ಇಲಾಖೆಯ ಸಹಾಯಕ ಪ್ರೊ.ಗಿರೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ವೇಲ್ ಶಾರ್ಕ್ ತಿಮಿಂಗಲದ ಸ್ಥಿತಿಗತಿ ಪರಿಶೀಲಿಸಿದರು.

ಈ ವೇಲ್ ಶಾರ್ಕ್ 4.3 ಮೀಟರ್‍ಗಳಷ್ಟು ಉದ್ದವಾಗಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಶ್ರೀಧರ್ ತಿಳಿಸಿದ್ದಾರೆ. ಈ ತಿಮಿಂಗಲ ಸಾವಿಗೆ ಕಾರಣಗಳು ತಿಳಿದು ಬಂದಿಲ್ಲ. ಜಲಚರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು , ನಂತರ ಮೃತ ದೇಹವನ್ನು ಕಡಲ ತಟದಲ್ಲೇ ಸಮಾಧಿ ಮಾಡಲಾಗುತ್ತದೆ.

ಸಾಗರ ಜಲಚರಗಳಲ್ಲೇ ವಿಸ್ಮಯ ಎನಿಸಿರುವ ತಿಮಿಂಗಲ ಶಾರ್ಕ್‍ಗಳಿಗೆ ಈಗ ವಲಸೆ ಸಮಯ. ಯಾವುದೋ ಕಾರಣದಿಂದ ಮೃತಪಟ್ಟು ಸಮುದ್ರ ದಂಡೆಗೆ ಕೊಚ್ಚಿಕೊಂಡು ಬಂದು ಬಿದ್ದಿದೆ ಎಂದು ಜಲಚರ ಆರೋಗ್ಯ ರಕ್ಷಣಾ ಇಲಾಖೆಯ ಗಿರೀಶ್ ತಿಳಿಸಿದ್ದಾರೆ.

ಪ್ರಕೃತಿ ವಿಸ್ಮಯದಲ್ಲಿ ಕಡಲ ಬಗೆಗಿನ ಕೌತುಕಗಳೇ ವಿಶೇಷ. ಅದರಲ್ಲೂ ಯಾವುದೇ ಕಲ್ಮಶಗಳಿರಲಿ ಸತ್ತ ಜೀವಿಗಳನ್ನು ಅದರ ಒಡಲಲ್ಲಿ ಇಟ್ಟುಕೊಳ್ಳದೆ ದಡಕ್ಕೆ ತಂದು ಎಸೆಯುತ್ತದೆ ಎಂದು ಕೂಡ ವಿಜ್ಞಾನಿಗಳು ಹೇಳುತ್ತಾರೆ.

Facebook Comments

Sri Raghav

Admin