ಬಿಗ್ ಬ್ರೇಕಿಂಗ್ : ಉತ್ತರ ಕೊರಿಯಾ ಸರ್ವಾಧಿಕಾರಿ ಕಿರಿಕ್ ಕಿಮ್ ಸಾವು..?!

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಆ.25- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬೆದರಿಕೆಯನ್ನು ಲೆಕ್ಕಿಸದೆ ನಿರಂತರ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿ ವಿಶ್ವದಲ್ಲಿ ಆತಂಕ ಸೃಷ್ಟಿಸಿದ್ದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (36) ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿವೆ.

ಆದರೆ ಸರ್ವಾಕಾರಿ ಆಡಳಿತ ಇರುವ ಉತ್ತರ ಕೊರಿಯಾದ ಉನ್ನತಾಧಿಕಾರಿಗಳು ಈ ಸುದ್ದಿಯನ್ನು ಬಹಿರಂಗಗೊಳಿಸಿಲ್ಲ. ಕೆಲವು ದಿನಗಳಿಂದಲೂ ಕಿಮ್ ಅನಾರೋಗ್ಯ ಮತ್ತು ಸಾವಿನ ಬಗ್ಗೆ ಹಲವಾರು ಸುದ್ದಿ ಮತ್ತು ವದಂತಿಗಳು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದಲ್ಲಿ ಹರಿದಾಡುತ್ತಿವೆ.

ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಸರ್ವಾಕಾರಿ ಕಿಮ್ ಕೋಮಾ ಸ್ಥಿತಿಗೆ ತಲುಪಿದ್ದು , ಮರಣ ಶಯ್ಯೆಯಲ್ಲಿದ್ದಾರೆ ಎಂದು ಮೊನ್ನೆಯಷ್ಟೇ ಮಾಧ್ಯಮಗಳು ವರದಿ ಮಾಡಿದ್ದವು.

ಈ ಮಧ್ಯೆ ಇಂದು ದಕ್ಷಿಣ ಕೊರಿಯಾದ ಕೆಲ ಮಾಧ್ಯಮಗಳು ಸರ್ವಾಕಾರಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ಉತ್ತರ ಕೊರಿಯಾ ಆಡಳಿತ ಗೌಪ್ಯವಾಗಿರಿಸಿದೆ ಎಂದು ವರದಿ ಮಾಡಿದೆ.

ಉತ್ತರ ಕೊರಿಯಾದಲ್ಲಿ ಸರ್ವಾಕಾರಿ ಮೃತಪಟ್ಟರೆ ಆ ಸಂಗತಿಯನ್ನು ತಕ್ಷಣ ಬಹಿರಂಗಗೊಳಿಸುವುದಿಲ್ಲ. ಉತ್ತರಾಧಿಕಾರಿಯನ್ನು ನೇಮಕ ಮಾಡಿ ಘೋಷಿಸಿದ ನಂತರವಷ್ಟೇ ಸಾವಿನ ಸುದ್ದಿಯನ್ನು ತಿಳಿಸುವ ಸಂಪ್ರದಾಯ ಅಲ್ಲಿ ಜಾರಿಯಲ್ಲಿದೆ.

ಹೀಗಾಗಿ ಕಿಮ್ ಬದುಕಿದ್ದಾರೋ ಅಥವಾ ಸತ್ತಿದ್ದಾರೋ ಎಂದು ಅಕೃತವಾಗಿ ದೃಢಪಟ್ಟಿಲ್ಲ. ಕಳೆದ ಕೆಲವು ದಿನಗಳಿಂದ ಕಿಮ್ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅತ್ಯಂತ ಸ್ಥೂಲಕಾಯರಾದ ಸರ್ವಾಕಾರಿ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಅವರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ಹೇಳಿವೆಯಾದರೂ ಅದು ಇನ್ನೂ ಖಚಿತ ಪಟ್ಟಿಲ್ಲ. ಕಳೆದ ಕೆಲವು ತಿಂಗಳ ಹಿಂದೆ ಕಿಮ್ ನಾಪತ್ತೆಯಾಗಿದ್ದಾರೆ ಮತ್ತು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಅವರು ರೆಸಾರ್ಟ್‍ವೊಂದರಲ್ಲಿ ಪ್ರತ್ಯಕ್ಷವಾಗಿ ಈ ಸುದ್ದಿಗಳಿಗೆ ತೆರೆ ಎಳೆದಿದ್ದರು.

ಈಗ ಕಿಮ್ ಸ್ಥಿತಿಯ ಬಗ್ಗೆ ಉತ್ತರ ಕೊರಿಯಾದ ಉನ್ನತಾಧಿಕಾರಿಗಳು ಅಕೃತವಾಗಿ ಬಹಿರಂಗಗೊಳಿಸಿದರೆ ಮಾತ್ರ ಸತ್ಯ ಸಂಗತಿ ಹೊರ ಬರಲಿದೆ.

Facebook Comments

Sri Raghav

Admin