ಮೇ 17ರ ನಂತರ ಕೇಂದ್ರ ಸರ್ಕಾರದ ಕಾರ್ಯತಂತ್ರ ಏನು..? : ಸೋನಿಯಾ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 6-ಡೆಡ್ಲಿ ಕೊರೊನಾ ವೈರಸ್‍ನಿಂದ ದೇಶಾದ್ಯಂತ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವು ಲಾಕ್‍ಡೌನ್ ವಿಷಯದಲ್ಲಿ ಅನುಸರಿಸಿರುವ ಮಾನದಂಡವೇನು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಡಳಿತ ಇರುವ ಮುಖ್ಯಮಂತ್ರಿಗಳೊಂದಿಗೆ ದೆಹಲಿಯಿಂದ ಇಂದು ಬೆಳಗ್ಗೆ ವಿಡಿಯೋ ಕಾನೆರೆನ್ಸ್ ಮೂಲಕ ಕಾಂಗ್ರೆಸ್ ಅನಾಯಕಿ ಸಭೆ ನಡೆಸಿದರು. ಕೇಂದ್ರ ಸರ್ಕಾರ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಈವರೆಗೆ ಮೂರು ಬಾರಿ ಲಾಕ್‍ಡೌನ್ ವಿಸ್ತರಿಸಿದೆ. ಯಾವ ಮಾನದಂಡದ ಮೇಲೆ ಇನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಸೋನಿಯಾ ಪ್ರಶ್ನಿಸಿದರು.

ಮೇ 17ರಂದು ಲಾಕ್‍ಡೌನ್-3 ಕೊನೆಗೊಳ್ಳಲಿದೆ. ಇದಾದ ನಂತರ ಮುಂದೇನು.. ಹೇಗೆ.. ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಪ್ರಶ್ನಿಸಿದರು. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಧುರೀಣ ರಾಹುಲ್ ಗಾಂ ಸಭೆಯಲ್ಲಿ ಹಾಜರಿದ್ದರು.

ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆಯಾ ರಾಜ್ಯಗಳ ಪರಿಸ್ಥಿತಿ ಮತ್ತು ಕೊರೊನಾ ಬಿಕ್ಕಟ್ಟು ನಿವಾರಣೆಗಾಗಿ ಮಾರ್ಗೋಪಾಯಗಳ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸಲಹೆ ಮತ್ತು ಅಭಿಪ್ರಾಯ ಪಡೆದರು.

Facebook Comments

Sri Raghav

Admin