ಬೈಕ್ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.10- ಸಾರ್ವಜನಿಕರಿಗೆ ಅಪಾಯವಾಗುವಂತೆ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರನ್ನು ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರದ ಚಂದನ್(21), ಲಿಖಿತ್(21), ಶ್ರೀನಗರದ ಸುವಂತ್(20), ಮತ್ತು ವಿನಯ್ ಅಲಿಯಾಸ್ ವೀಲ್ಹೀಂಗ್ ವಿನಯ ಬಂಧಿತರು . ಈ ನಾಲ್ವರ ಮೊಬೈಲ್‍ಗಳನ್ನು ಪರಿಶೀಲಿಸಿದಾಗ, ಈ ಹಿಂದೆಯೂ ಕೂಡ ಇತರರೊಂದಿಗೆ ಸೇರಿ ವೀಲ್ಹಿಂಗ್ ಮಾಡುತ್ತಿದ್ದವ ವಿಡಿಯೋಗಳು ಕಂಡುಬಂದಿದ್ದು, ವಿಡಿಯೋ ಆಧಾರದ ಮೇಲೆ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ.

ನಿನ್ನೆ ಮಧ್ಯಾಹ್ನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಯುವಕರು ವೀಲ್ಹಿಂಗ್ ಮಾಡುತ್ತಿದ್ದ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಪೊಲೀಸರಿಗೆ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ನಾಲ್ವರನ್ನು ಬಂಸಿ 3 ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂರು ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Facebook Comments

Sri Raghav

Admin