ನಾನು ಎಷ್ಟು ಮತಗಳಿಂದ ಮುಂದಿದ್ದೇನೆ..?? ಸನ್ನಿ ಲಿಯೋನ್ ಪ್ರಶ್ನೆ..!

ಈ ಸುದ್ದಿಯನ್ನು ಶೇರ್ ಮಾಡಿ

ನಾನು ಎಷ್ಟು ಮತಗಳಿಂದ ಮುಂದಿದ್ದೇನೆ..? ಇದು ಮಾದಕ ನಟಿ ಸನ್ನಿ ಲಿಯೋನ್, ರಿಪಬ್ಲಿಕ್ ಟಿವಿಯ ಸಂಪದಾಕ ಮತ್ತು ಪ್ರೈಮ್ ಟ್ರೈಮ್ ಆಂಕರ್ ಅರ್ನಬ್ ಗೋಸ್ವಾಮಿಗೆ ಕೇಳಿದ ಪ್ರಶ್ನೆ..! ಈ ಪ್ರಶ್ನೆ ಕೇಳಿದ ಸನ್ನಿ ಲಿಯೋನ್ ಯಾವ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಳು ಎಂಬ ಅನುಮಾನ ಬರುವುದು ಸಹಜ.!

ಆದರೆ ಅರ್ನಬ್ ಗೋಸ್ವಾಮಿ ಚುನಾವಣಾ ಫಲಿತಾಂಶದ ನೇರ ಪ್ರಸಾರದಲ್ಲಿ ರಿಸಲ್ಟ್ ಟ್ರೆಂಡ್ ಬಗ್ಗೆ ತಿಳಿಸುವಾಗ ಗುರುದಾಸ್ ಪುರದ ಬಿಜೆಪಿ ಅಭ್ಯರ್ಥಿ ಮತ್ತು ನಟ ಸನ್ನಿ ಡಿಯೋಲ್ ಬದಲು ಸನ್ನಿ ಲಿಯೋನ್ ಎಂದು ತಪ್ಪಾಗಿ ಉಚ್ಚರಿದ್ದು ನಗೆಪಾಟಲು ಮತ್ತು ಸ್ವಾರಸ್ಯಕರ ಸನ್ನಿವೇಶಕ್ಕೂ ಕಾರಣವಾಯಿತು.

ಪಂಜಾಬ್‍ನ ಗುರುದಾಸ್‍ಪುರ್ ಲೋಕಸಭಾ ಕ್ಷೇತ್ರದಲ್ಲಿ ಸನ್ನಿ ಲಿಯೋನ್, ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಸುನಿಲ್ ಜಾಖರ್ ಅವರಿಗಿಂತ ಮುನ್ನಡೆಯಲ್ಲಿದ್ದಾರೆ ಎಂದು ಹೇಳಿದ್ದರು. ಸನ್ನಿ ಡಿಯೋಲ್ ಬದಲಿಗೆ ಸನ್ನಿ ಲಿಯೋನ್ ಎಂದು ಅರ್ನಬ್ ಹೇಳಿದ್ದು ಹಾಸ್ಯ ಸನ್ನಿವೇಶಕ್ಕೆ ಎಡೆ ಮಾಡಿಕೊಟ್ಟಿತು.

ಇದನ್ನು ಹಾಸ್ಯ ಪ್ರಜ್ಞೆಯಿಂದ ಸ್ವೀಕರಿಸರುವ ಸನ್ನಿ ಲಿಯೋನ್ ಟ್ಟೀಟರ್‍ನಲ್ಲಿ ಪ್ರತಿಕ್ರಿಯಿಸಿ ನಾನು ಎಷ್ಟು ಮತಗಳಿಂದ ಮುಂದಿದ್ದೇನೆ? ಎಂಬುದನ್ನು ತಿಳಿಸುವಿರಾ ಎಂದು ತಮಾಷೆ ಮಾಡಿದ್ದಾಳೆ. ಲಿಯೋನ್‍ನ ಹಾಸ್ಯ ಪ್ರಜ್ಞೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin