ಕಾಶ್ಮೀರ ಕುರಿತು ಪ್ರಶ್ನಿಸಿದ ಪಾಕ್ ಪತ್ರಕರ್ತನಿಗೆ ಇಮ್ರಾನ್ ಎದುರೇ ಬೆವರಿಳಿಸಿದ ಟ್ರಂಪ್..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.24- ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮತ್ತೆ ಮುಖಭಂಗಕ್ಕೆ ಒಳಗಾಗುತ್ತಿರುವ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‍ಖಾನ್ ಇನ್ನೊಂದು ಪೇಚಿನ ಸಂಗತಿ ಎದುರಿಸುವಂತಾಯಿತು.


ನ್ಯೂಯಾರ್ಕ್‍ನಲ್ಲಿ ನಿನ್ನೆ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಮ್ರಾನ್‍ಖಾನ್ ನಡುವೆ ಭೇಟಿ ಮತ್ತು ಮಾತುಕತೆ ನಂತರ ಜಂಟಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರು ಕಾಶ್ಮೀರ ಕುರಿತು ಪದೇ ಪದೇ ಪ್ರಶ್ನೆಯೊಂದನ್ನು ಕೇಳುತ್ತಾ ವಿತಂಡವಾದ ಮಾಡುತ್ತಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು ನೀವು ನನಗೆ ಪ್ರಶ್ನೆ ಕೇಳುತ್ತಿಲ್ಲ. ಬದಲಿಗೆ ನಿಮ್ಮ ಪ್ರಶ್ನೆಯೇ ಹೇಳಿಕೆಯಂತಿದೆ. ಇದು ನನಗೆ ವಿತಂಡವಾದದಂತೆ ಕಾಣುತ್ತಿದೆ ಎಂದು ಟ್ರಂಪ್ ತಿರುಗೇಟು ನೀಡಿದರು.

ಅಲ್ಲದೆ ಇವರು (ಪತ್ರಕರ್ತ) ನಿಮ್ಮ ತಂಡದವರೇ (ಇಮ್ರಾನ್‍ಖಾನ್) ಎಂದು ಪ್ರಶ್ನಿಸಿದರಲ್ಲದೆ ಇಂತಹವರನ್ನು ಎಲ್ಲಿಂದ ಕರೆದು ತರುತ್ತೀರಿ ಎಂದು ಪಾಕ್ ಪ್ರಧಾನಿಗೆ ಪ್ರಶ್ನಿಸಿದರು. ಇದರಿಂದ ಇಮ್ರಾನ್‍ಖಾನ್ ಮುಖ ಬಾಡಿತು.

ಇದೇ ಸಂದರ್ಭದಲ್ಲಿ ಟ್ರಂಪ್ ಮತ್ತು ಖಾನ್ ಜಂಟಿ ಸುದ್ದಿಗೋಷ್ಠಿ ಪ್ರಚಾರ ಮಾಡುತ್ತಿದ್ದ ಪಾಕಿಸ್ತಾನದ ವಾರ್ತಾ ವಾಹಿನಿಯೊಂದು ಈ ಇರಿಸು ಮುರಿಸಿನ ಘಟನೆಯಿಂದ ತಬ್ಬಿಬ್ಬಾಗಿ ತನ್ನ ಪ್ರಸಾರವನ್ನೇ ತಾತ್ಕಾಲಿಕವಾಗಿ ನಿಲ್ಲಿಸಿತು.

Facebook Comments

Sri Raghav

Admin