ವೈಟ್‌ ಟಾಪಿಂಗ್‌ ಅವ್ಯವಹಾರ ಕುರಿತು ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.17- ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರ ಪ್ರಭಾವದಿಂದಾಗಿ ವಾರ್ಡ್ ನಂ.167ರ ವೈಟ್‌ ಟಾಪಿಂಗ್‌ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಅದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಮಾಜಿ ಮೇಯರ್‍ಗಳಾದ ರಾಮಚಂದ್ರಪ್ಪ, ಪಿ.ಆರ್.ರಮೇಶ್, ಪದ್ಮಾವತಿ, ಆಡಳಿತ ಪಕ್ಷದ ಮಾಜಿ ನಾಯಕರಾದ ಸತ್ಯನಾರಾಯಣ್, ಶಿವರಾಜ್, ವಾಜಿದ್ ಮತ್ತಿತರರು ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಖಾಸಗಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ನಗರದ ಹೃದಯ ಭಾಗದಲ್ಲಿ ಕೊಲೆಯಾಗುತ್ತಾರೆ. ಜೈಲಿನಲ್ಲಿ ವಿಚಾರಣಾಧೀನ ಕೈದಿ ಸಾವನ್ನಪ್ಪುತ್ತಾರೆ.

ಬಾಗಲಕೋಟೆಯಲ್ಲಿ ಜೋಡಿ ಕೊಲೆಗಳಾಗುತ್ತವೆ. ಅದೇ ರೀತಿ ಭ್ರಷ್ಟಾಚಾರವೂ ತಾಂಡವವಾಡುತ್ತಿದೆ. ನೆಲಮಂಗಲ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕೊಟ್ಟ ರೈತರು ಪರಿಹಾರ ಪಡೆದುಕೊಳ್ಳಲು ಶೇ.10ರಷ್ಟು ಕಮಿಷನ್ ಕೊಡುವ ಅನಿವಾ ರ್ಯತೆ ಎದುರಾಗಿದೆ. ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್‍ಟಾಂಪಿಂಗ್ ಕಾಮಗಾರಿ ಗುತ್ತಿಗೆ ನೀಡುವಾಗ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ವಕ್ತಾರರಾದ ಎನ್. ಆರ್.ರಮೇಶ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ದೂರವಾಣಿ ಕರೆ ಮಾಡಿ 4ಜಿ ವಿನಾಯ್ತಿ ನೀಡಿ ಮತ್ತು ಅಂದಾಜು ವೆಚ್ಚದಲ್ಲಿ ಶೇ.3ರಷ್ಟು ಕಡಿಮೆ ಮಾಡಿ ಟೆಂಡರ್ ಇಲ್ಲದೆ ನೇರವಾಗಿ ಗುತ್ತಿಗೆ ನೀಡುವಂತೆ ಸೂಚನೆ ನೀಡಿದ್ದಾರೆ. ಅದನ್ನು ಆಧರಿಸಿ ಗುತ್ತಿಗೆ ಕೂಡ ನೀಡಲಾಗಿದೆ. ಗುತ್ತಿಗೆ ಪಡೆದಿರುವವರು ಎನ್.ಆರ್.ರಮೇಶ್ ಅವರ ಬೇನಾಮಿ ಗುತ್ತಿಗೆದಾರರು. ರಮೇಶ್ ಸೂಪರ್ ಸಿಎಂನಂತೆ ವರ್ತಿಸುತ್ತಿದ್ದಾರೆ.

ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅವರು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿರುವುದು ಪ್ರಶ್ನಾರ್ಹವಾಗಿದೆ. ಪೊಲಿಟಿಕಲ್ ಕಮಿಷನ್ ಏಜೆಂಟ್‍ನಂತೆ ವರ್ತಿಸುತ್ತಿರುವ ರಮೇಶ್ ಅವರ ನಡವಳಿಕೆ ನೋಡಿದರೆ. ರಾಜ್ಯ ಆಡಳಿತ ಸಂಪೂರ್ಣ ಹಳಿ ತಪ್ಪುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈಟ್ ಟಾಪಿಂಗ್ ಗುತ್ತಿಗೆ ನೀಡಿರುವ ಹಣಗರದಲ್ಲಿ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು, ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಪಾತ್ರವಿದೆ.

ಹಾಗಾಗಿ ಇದನ್ನು ಹೈಕೋರ್ಟ್‍ನ ಹಾಲಿ ನ್ಯಾಯಾಧೀಶ ರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಉಗ್ರಪ್ಪ ಒತ್ತಾಯಿಸಿದರು. ಇಲ್ಲದಿದ್ದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ದೂಷಿಸಿದ ಪ್ರಧಾನಿ ಮೋದಿ ಈಗ ಎಲ್ಲಿದ್ದಾರೆ. 16 ಕೋಟಿ ರೂ. ಮೊತ್ತದ ವೈಟ್‍ಟಾಪಿಂಗ್ ಕಾಮಗಾರಿಯಲ್ಲಿ ಮುಖ್ಯಮಂತ್ರಿ ಕಚೇರಿಗೆ ಎಷ್ಟು ಕಿಕ್‍ಬ್ಯಾಕ್ ಹೋಗಿದೆ ಎಂದು ಉಗ್ರಪ್ಪ ಪ್ರಶ್ನಿಸಿದರು.

ಮಾಜಿ ಮೇಯರ್ ರಾಮಚಂದ್ರಪ್ಪ ಮಾತನಾಡಿ, ಬಿಬಿಎಂಪಿಯಲ್ಲಿ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ. ಕಸ ನಿರ್ವಹಣೆಯಲ್ಲಿ ಕೆಟ್ಟ ಹೆಸರು ಬಂದಿತ್ತು. ಐದು ಸಾವಿರ ಕೋಟಿ ಸಾಲ ಮಾಡಿ ಬಿಬಿಎಂಪಿ ಆಸ್ತಿಗಳನ್ನು ಅಡಮಾನ ಇಟ್ಟಿತ್ತು. ಪ್ರತಿ ವಿಷಯಕ್ಕೂ ಎನ್.ಆರ್.ರಮೇಶ್ ದೂರು ನೀಡುತ್ತಾರೆ. ಈಗ 167ನೇ ವಾರ್ಡ್‍ನಲ್ಲಿ ನಡೆದಿರುವ ಹಗರಣಗಳ ಕುರಿತು ರಮೇಶ್ ವಿರುದ್ಧ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಮಾಜಿ ಮೇಯರ್ ಪಿ.ಆರ್.ರಮೇಶ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡು ಎನ್.ಆರ್.ರಮೇಶ್ ಬಿಬಿಎಂಪಿ ಅಧಿಕಾರಿಗಳು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಪಾಲಿಕೆ ಸದಸ್ಯನಾಗದೇ ಇದ್ದರೂ ಅಧಿಕÁರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡುವ ವಾತಾವರಣವಾಗಿದೆ ಎಂದು ಆರೋಪಿಸಿದರು.

Facebook Comments