ಓಮಿಕ್ರಾನ್ ತೀವ್ರತೆ ಇನ್ನೂ ಸ್ಪಷ್ಟವಾಗಿಲ್ಲ : ವಿಶ್ವ ಆರೋಗ್ಯ ಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.29-ನೂತನವಾಗಿ ಪತ್ತೆಯಾಗಿರುವ ಕೊರೊನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಹೆಚ್ಚು ಸಾಂಕ್ರಾಮಿಕವೇ ಅಥವಾ ತೀವ್ರ ಸಾಂಕ್ರಾಮಿಕವಾಗಿರುವ, ಜಾಗತಿಕವಾಗಿ ಕಾಣಿಸಿಕೊಂಡಿರುವ ಡೆಲ್ಟಾ ರೂಪಾಂತರಿ ಸೇರಿದಂತೆ ಇತರ ರೂಪಾಂತರಿ ವೈರಸಗಳಿಗೆ ಹೋಲಿಸಿದರೆ ಗಂಭೀರ ಕಾಯಿಲೆ ಉಂಟು ಮಾಡುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಓಮಿಕ್ರಾನ್‍ಗೆ ಸಂಬಂಧಿಸಿದ ಲಕ್ಷಣಗಳು ಇತರ ರೂಪಾಂತರಿಗಳಿಗಿಂತ ವಿಭಿನ್ನವೇ ಎಂದು ಸೂಚಿಸುವ ಯಾವುದೇ ಮಾಹಿತಿ ಸದ್ಯಕ್ಕಿಲ್ಲ ಎಂದು ಡಬ್ಲ್ಯೂಹೆಚ್‍ಒ ತಿಳಿಸಿದೆ. ವಿಶ್ವವಿದ್ಯಾಲಯ ಅಧ್ಯಯನಗಳ ಪರಕಾರ ಇದರಿಂದ ಸೋಂಕಿನ ಲಕ್ಷಣಗಳು ಗೋಚರಿಸುತ್ತವೆ ಎಂದು ವರದಿಯಾಗಿತ್ತು.

ಯುವಕರಿಗೆ ಹೆಚ್ಚು ಲಘುವಾದ ಕಾಯಿಲೆ ತಲೆದೋರಬಹುದು ಎಂದು ಈ ಮುಂಚಿನವ ವರದಿಗಳು ತಿಳಿಸಿದ್ದವು. ಆದರೆ ಓಮಿಕ್ರಾನ್ ರೂಪಾಂತರಿಯ ತೀವ್ರತೆಯ ಮಟ್ಟ ಅರಿತುಕೊಳ್ಳಲು ಕೆಲವು ದಿನಗಳಿಂದ ಕೆಲವು ವಾರಗಳಷ್ಟು ಸಮಯಾವಕಾಶ ಬೇಕು ಎಂದು ಡಬ್ಲ್ಯುಎಚ್‍ಒ ವಿವರಿಸಿದೆ.

ಈ ರೂಪಾಂತರಿಯಿಂದ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಪಾಸಿಟಿವ್ ಇರುವ ಜನರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದು ಓಮಿಕ್ರಾನ್‍ನಿಂದ ಆಗಿದೆಯೇ ಥವಾ ಬೇರೆ ಕಾರಣದಿಂದಲೇ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ ಎಂದು ಡಬ್ಲ್ಯುಹೆಚ್ ಪ್ರತಿಪಾದಿಸಿದೆ.

ಡೆಲ್ಟಾ ರೂಪಾಂತ ಸೇರಿದಂತೆ ಕೋವಿಡ್ ಎಲ್ಲ ಪ್ರಬೇಧಗಳು ಜಗತ್ತಿನಾದ್ಯಂತ ಪ್ರಬಲವಾಗಿದ್ದು, ಗಂಭೀರ ಕಾಯಿಲೆ ಅಥವಾ ಮರಣವನ್ನುಂಟು ಮಾಡಬಹುದು. ಸುಲಭವಾಗಿ ತುತ್ತಾಗಬಲ್ಲಂಥ ವ್ಯಕ್ತಿಗಳನ್ನು ಇವು ಬಾಸುತ್ತವೆ. ಆದ್ದರಿಂದ ತಡೆಗಟ್ಟುವಿಕೆಯೇ ಅತಿಪ್ರಮುಖವಾದುದಾಗಿದೆ ಎಂದು ಡಬ್ಲ್ಯುಹೆಚ್‍ಒ ಸಲಹೆ ಮಾಡಿದೆ.

Facebook Comments

Sri Raghav

Admin