ಕೊರೊನಾ ಮೂಲ ಪತ್ತೆಗೆ ಮುಂದಾದ WHO : ಚೀನಾಗೆ ಆಘಾತ

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಜು.22- ಮತ್ತೆ ಕೊರೊನಾ ವೈರಾಣು ಮೂಲ ಪತ್ತೆ ಹಚ್ಚಲು ಮುಂದಾಗಿರುವ ವಿಶ್ವ ಆರೋಗ್ಯ ಸಂಸ್ಥೆ ನಿರ್ಧಾರಕ್ಕೆ ಚೀನಾ ಆಘಾತ ವ್ಯಕ್ತಪಡಿಸಿದೆ. ಈಗಾಗಲೇ ವೈರಾಣು ಚೀನಿ ಪ್ರಯೋಗಾಲಯದಲ್ಲಿ ಸೃಷ್ಟಿಯಾಗಿಲ್ಲ ಎನ್ನುವುದು ಸಾಬೀತಾಗಿದ್ದರೂ ಮತ್ತೆ ವಿಶ್ವ ಸಂಸ್ಥೆ ಎರಡನೆ ಹಂತದಲ್ಲಿ ಕೊರೊನಾ ಮೂಲ ಪತ್ತೆಗೆ ಮುಂದಾಗಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಸಚಿವ ಝೆಂಗ್ ಯಿಕ್ಸಿನ್ ತಿಳಿಸಿದ್ದಾರೆ.

ವಿಶ್ವ ಅರೋಗ್ಯ ಸಂಸ್ಥೆಯ ಮುಖ್ಯಸ್ಥರು ಕಳೆದ ವಾರವಷ್ಟೇ ಚೀನಿ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಾಣು ಸೃಷ್ಟಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದರು ಆದರೆ, ಇದೀಗ ಮತ್ತೆ ಮೂಲ ಹುಡಕಲು ಹೊರಟಿರುವುದು ಏಕೆ ಎಂದು ಆರ್ಥವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

Facebook Comments