ಏಷ್ಯಾದ ಅತಿ ದೊಡ್ಡ ಸ್ಲಮ್ ಧಾರಾವಿಯಲ್ಲಿ ಕೊರೋನಾ ನಿಯಂತ್ರಣಕ್ಕೆ WHO ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಜು.11-ಕೊರೊನಾವೈರಸ್ ಹಾಟ್‍ಸ್ಪಾಟ್ ಧಾರಾವಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಎರಡು ತಿಂಗಳ ಹಿಂದೆ ಮುಂಬೈನ ಪ್ರದೇಶ ಧಾರಾವಿ ಕೊವಿಡ್ ನಿಂದ ತತ್ತರಿಸಿ, ಕರೊನಾ ಸೋಂಕಿನ ಹಾಟ್‍ಸ್ಪಾಟ್ ಕೇಂದ್ರವಾಗಿತ್ತು. ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೊಳಗೇರಿ ಎನಿಸಿಕೊಂಡಿರುವ ಧಾರಾವಿ ಸಂಪರ್ಕದಲ್ಲಿದ್ದವರು ದೇಶದ ವಿವಿಧೆಡೆಗೆ ಓಡಾಡಿದವರಿಂದ ಕರೊನಾ ಪ್ರಮಾಣ ತೀವ್ರವಾಗಿ ಹೆಚ್ಚಾಗಿದೆ.

ಧಾರಾವಿಯಲ್ಲಿ ಕಿರಿದಾದ ಪ್ರದೇಶ, ಒಂದೇ ಕಡೆ ಸಾವಿರಾರು ಜನರ ವಾಸ, ಸಮೂಹ ಶೌಚಾಲಯ ಇದರಿಂದಾಗಿ ವೈರಸ್ ಹೆಚ್ಚಾಗುವ ಭೀತಿ ಇತ್ತು ಆದರೆ ಸೋಂಕು ನಿಯಂತ್ರಣಕ್ಕೆ ಬಂದಿದ್ದು, ಧಾರಾವಿ ಇಡೀ ವಿಶ್ವಕ್ಕೆ ಮಾದರಿ ಎಂದು ಶ್ಲಾಘಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಮಾತನಾಡಿ, ಇಟಲಿ, ಸ್ಪೇನ್, ದಕ್ಷಿಣ ಕೊರಿಯಾದಲ್ಲಿ ಕೂಡ ಸ್ಲಂಗಳಿವೆ, ಅಲ್ಲಿ ಕೊರೊನಾ ಸೋಂಕು ಎತೇಚ್ಛವಾಗಿ ಹರಡಿದೆ. ಆದರೆ ಧಾರಾವಿಯಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರೊನಾವನ್ನು ಯಶಸ್ವಿಯಾಗಿ ನಿಯಂತ್ರಣ ಮಾಡಿದ ಕೆಲವು ನಗರಗಳ ಹೆಸರನ್ನು ಹೇಳಿ ಉದಾಹರಣೆ ನೀಡಿರುವ ಡಬ್ಲ್ಯೂಎಚ್‍ಒ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಧಾರಾವಿ ಹೆಸರನ್ನೂ ಉಲ್ಲೇಖಿಸಿ ಪ್ರಶಂಸಿಸಿದ್ದಾರೆ.

ಕರೊನಾ ಸೋಂಕು ಏಕಾಏಕಿ ತೀವ್ರಗೊಂಡರೂ ಅದನ್ನು ಮತ್ತೆ ನಿಯಂತ್ರಣಕ್ಕೆ ತರಬಹುದು ಎಂಬುದಕ್ಕೆ ಜಗತ್ತಿನಲ್ಲಿ ಹಲವು ಉದಾಹರಣೆಗಳು ಸಿಗುತ್ತವೆ. ವಿಯೆಟ್ನಾಂ, ಕಾಂಬೋಡಿಯಾ, ಥೈಲ್ಯಾಂಡ್, ನ್ಯೂಜಿಲ್ಯಾಂಡ್, ಇಟಲಿ, ಸ್ಪೇನ್, ಸೌತ್ ಕೊರಿಯಾ ಮತ್ತು ಮುಂಬೈನ ಧಾರಾವಿಗಳು ಉತ್ತಮ ಉದಾಹರಣೆಗಳು ಎಂದು ಡಾ. ಟೆಡ್ರೋಸ್ ಹೇಳಿದ್ದಾರೆ.

ಧಾರಾವಿಯಂತೂ ಅತ್ಯಂತ ಜನನಿಬಿಡ ಪ್ರದೇಶ. ಅಂಥದ್ದರಲ್ಲಿ ಅಲ್ಲಿ ಕರೊನಾ ಚೈನ್ ಬ್ರೇಕ್ ಮಾಡಲಾಗಿದೆ. ತಪಾಸಣೆ, ಟ್ರೇಸಿಂಗ್, ಐಸೋಲೇಶನ್ ಮತ್ತು ಸೋಂಕಿತರಿಗೆ ನೀಡಲಾಗುವ ಶೀಘ್ರ, ಉತ್ತಮ ಚಿಕಿತ್ಸೆಗಳಿಂದ ಕೊವಿಡ್-19ನ್ನು ನಿಯಂತ್ರಿಸಬಹುದು ಎಂದು ಡಾ. ಟೆಡ್ರೋಸ್ ಅವರು ಹೇಳಿದ್ದಾರೆ.

ವಿಶ್ವದ ಎಲ್ಲೆಡೆ ಸೋಂಕು ಹರಡುತ್ತಿದೆ ಆದರೆ ಅದನ್ನು ನಿಯಂತ್ರಣಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಮುಂಬೈನಲ್ಲಿ ಜನಸಂಖ್ಯೆಯೂ ಕೂಡ ಹೆಚ್ಚಿದೆ. ಅಲ್ಲಿ ಸಮುದಾಯ ಸೋಂಕು ಹರಡುವ ಸಾಧ್ಯತೆಯೂ ಇದೆ. ಟೆಸ್ಟಿಂಗ್, ಟ್ರೇಸಿಂಗ್, ಐಸೋಲೇಷನ್, ಚಿಕಿತ್ಸೆ ಕೂಡ ಮುಖ್ಯವಾಗಿರುತ್ತದೆ.

ಕೊರೊನಾವೈರಸ್ ವಿಶ್ವದಾದ್ಯಂತ 555,000 ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ ಕಳೆದ ಡಿಸೆಂಬರ್ನಿಂದಲೇ ಸೋಂಕು ಹರಡಲು ಆರಂಭವಾಗಿದೆ. 196 ದೇಶಗಳಿಂದ 12.3 ಮಿಲಿಯನ್ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 2 ಲಕ್ಷದ 31 ಸಾವಿರ ಕೊರೊನಾ ಸೋಂಕಿತರಿದ್ದಾರೆ. 1 ಲಕ್ಷದ 27 ಸಾವಿರ ಮಂದಿ ಗುಣಮುಖರಾಗಿದ್ದಾರೆ. 9,667 ಮಂದಿ ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin