ಸ್ನೇಹಿತರ ಜೊತೆ ಮಲಗುವಂತೆ ಪತ್ನಿಗೆ ಹಿಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ಸ್ನೇಹಿತರ ಜೊತೆ ಮಲಗುವಂತೆ ಪತ್ನಿಗೆ ಹಿಂಸಿಸುತ್ತಿದ್ದ ಆರೋಪಿಯನ್ನು ವಿಚಾರಣೆ ಮಾಡಲು ಪೂರ್ವ ವಿಭಾಗದ ಮಹಿಳಾ ಠಾಣೆ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಟಿಎಂ ಲೇಔಟ್ ನಿವಾಸಿ ವಾಸೀಂ ಶರೀಫ್ ಎಂಬುವರ ಜೊತೆ 2018ರಲ್ಲಿ ನನಗೆ ಮದುವೆಯಾಯಿತು. ಆಗಿನಿಂದಲೂ ನನ್ನ ಪತಿ ಒಂದಲ್ಲ ಒಂದು ರೀತಿ ಹಿಂಸೆ ಕೊಡುತ್ತಿದ್ದಾರೆ. ತವರಿನಿಂದ ಹಣ, ಆಭರಣ ತರಬೇಕು. ಮದ್ಯ ಸೇವನೆ ಮಾಡಬೇಕು, ನನ್ನ ಸ್ನೇಹಿತರ ಜೊತೆ ಮಲಗಬೇಕು ಎಂದು ಒತ್ತಾಯಿಸಿ ಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಊಟಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನನ್ನ ಸ್ನೇಹಿತರು ಬರುತ್ತಾರೆ, ಅವರ ಜೊತೆ ಮಲಗಬೇಕು ಎಂದು ಒತ್ತಾಯಿಸಿದ್ದರು. ಅದಲ್ಲದೆ ತಮ್ಮ ಮನೆಯಲ್ಲೇ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡಿ ಮದ್ಯ ಸಬರಾಜು ಮಾಡುವಂತೆ ಒತ್ತಾಯಿಸುತ್ತಿದ್ದರು. ನಂತರ ಅವರ ಜೊತೆ ಮಲಗುವಂತೆ ಕೂಡ ಹಿಂಸೆ ಕೊಡುತ್ತಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.

ಹಿಂಸೆ ಮಾನಸಿಕ ಕಿರುಕೂಳ, ಹಲ್ಲೆಯಿಂದ ನೊಂದ ಮಹಿಳೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Facebook Comments