ಪತ್ನಿಯನ್ನು ಕೊಂದು ರಸ್ತೆಯಲ್ಲಿ ಮಲಗಿಸಿ ‘ಅಪಘಾತ’ದ ನಾಟಕವಾಡಿದ ಪ್ರೇಮಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಡಿ.1- ಪತಿಯೇ ಪತ್ನಿಯನ್ನು ಕೊಲೆ ಮಾಡಿ ರಾಜ್ಯ ಹೆದ್ದಾರಿಯಲ್ಲಿ ಮಲಗಿಸಿ ಅಪಘಾತವನ್ನಾಗಿ ಬಿಂಬಿಸಲು ಹೋಗಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ತೊಂಡೇಬಾವಿ ಹೋಬಳಿಯ ಕಿಶ್ಚಿಯನ್ ಕಾಲೋನಿ ಕ್ರಾಸ್ ರಾಜ್ಯ ಹೆದ್ದಾರಿ-9 ರಲ್ಲಿ ನಿನ್ನೆ ರಾತ್ರಿ ವೇಳೆಯಲ್ಲಿ ಜರುಗಿದೆ. ಪವಿತ್ರ (24) ಪತಿಯಿಂದಲೇ ಕೊಲೆಯಾದ ದುರ್ಧೈವಿ ಪತ್ನಿ , ಆನಂದ್ (29) ಪತ್ನಿಯನ್ನು ಕೊಲೆ ಮಾಡಿದ ಆಸಾಮಿ ಚಿಕ್ಕಬಳ್ಳಾಪುರ ತಾಲೂಕಿನ ದೇವಸ್ಥಾನ ಹೊಸಹಳ್ಳಿ ವಾಸಿ ಎಂದು ಗುರುತಿಸಲಾಗಿದೆ.

ಆನಂದ ಮತ್ತು ಪವಿತ್ರ ಕಳೆದ ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಪವಿತ್ರ ಬಲಿಜಿಗ ಜಾತಿಗೆ ಸೇರಿದ್ದು, ಆನಂದ ಒಕ್ಕಲಿಗೆ ಜಾತಿಗೆ ಸೇರಿದ್ದಾನೆ. ಮದುವೆಯಾದ ಎರಡು ವರ್ಷದಲ್ಲಿ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆಯಿಲ್ಲದೆ ಜಗಳವಾಗುತ್ತಿದ್ದರ ಹಿನ್ನೆಲೆಯಲ್ಲಿ ತನ್ನ ತವರು ಮನೆಯಾದ ಪೆರೆಸಂದ್ರಕ್ಕೆ ತೆರಳಿದ್ದು, ಆನಂದ ಶನಿವಾರ ಸಂಜೆ ಕರೆ ಮಾಡಿ ಪವಿತ್ರಾಳನ್ನು ಕರೆಸಿಕೊಂಡು ದ್ವಿಚಕ್ರ ವಾಹನದಲ್ಲಿ ತಾಲೂಕಿನ ಕಲಿನಾಯಕನಹಳ್ಳಿ ಸಮೀಪದ ಕಿಶ್ಚಿಯನ್ ಕಾಲೋನಿಯ ಬಳಿ ಬಂದಾಗ ಇಬ್ಬರ ನಡುವೆ ಜಗಳವಾಗಿದ್ದು, ಆನಂದ್ ಪವಿತ್ರಾಳ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಪವಿತ್ರ ರಸ್ತೆಯ ಪಕ್ಕದಲ್ಲಿನ ಹೊಲದಲ್ಲಿ ಓಡಿಹೋಗಲು ಯತ್ನಿಸಿದ್ದಾಳೆ.

ಆಕೆಯನ್ನು ಹಿಂಬಾಲಿಸಿ ಆಕೆಯ ವೇಲ್ ನಿಂದಲೇ ಕುತ್ತಿಗೆ ಬಿಗಿದು ಸಾಯಿಸಿ ಶವವನ್ನು ಕಿಶ್ಚಿಯನ್ ಕಾಲೋನಿ ಕ್ರಾಸ್ ರಾಜ್ಯ ಹೆದ್ದಾರಿಯಲ್ಲಿ ಮಲಗಿಸಿ ಯಾವುದಾದರೂ ವಾಹನ ಹತ್ತಿದ ನಂತರ ಅಪಘಾತ ಎಂದು ಬಿಂಬಿಸಲು ಸಂಚು ರೂಪಿಸಿದ್ದ, ಗಸ್ತಿನಲ್ಲಿನದ್ದ ಹೆದ್ದಾರಿ ಗಸ್ತು ವಾಹನಕ್ಕೆ ರಸ್ತೆಯ ಮಧ್ಯದಲ್ಲಿ ಹೆಣ್ಣಿನ ಶವವನೊಂದು ಬಿದ್ದಿರುವುದಾಗಿ ಕರೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ವೃತ್ತನಿರೀಕ್ಷಕ ಎಸ್.ರವಿರವರಿಗೆ ಸುದ್ದಿ ಮುಟ್ಟಿಸಿದ್ದು,

ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳದಲ್ಲಿ ಸಿಕ್ಕ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಐಡಿ ಕಾರ್ಡ್ ನಿಂದ ಮೃತಳ ವಿಳಾಸ ತಿಳಿದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಿದ್ದಾರೆ.

Facebook Comments