ಹಣ ಕೊಡೋದಾಗಿ ಕರೆಸಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯ ಬರ್ಬರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಜ.3- ಹಣಕ್ಕಾಗಿ ಪೀಡಿಸುತ್ತಿದ್ದ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಪತಿ ನಂತರ ಪೊಲೀಸರಿಗೆ ಶರಣಾಗಿರುವ ಘಟನೆ ಕಲಬುರಗಿ ತಾಲೂಕಿನ ಅವರಾದ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಶರಣಮ್ಮ ಕೊಲೆಯಾದ ದುರ್ದೈವಿ. ಮೃತ ಶರಣಮ್ಮ ನಾಲ್ಕು ವರ್ಷಗಳ ಹಿಂದೆ ಅದೇ ಗ್ರಾಮದ ಶರಣಪ್ಪ ಎಂಬವನ ಜೊತೆ ಮದುವೆಯಾಗಿದ್ದಳು. ಮದುವೆ ನಂತರ ಶರಣಮ್ಮ ಗಂಡನ ಜೊತೆ ಜಗಳವಾಡಿ ಬೇರೆಯವರೊಂದಿಗೆ ಇದ್ದಳು ಎಂದು ಹೇಳಲಾಗಿದೆ.

ಇತ್ತೀಚೆಗೆ ಶರಣಮ್ಮ ಗ್ರಾಮಕ್ಕೆ ಬಂದು ಪತಿ ಶರಣಪ್ಪನ ಬಳಿ ಹಣ ನೀಡುವಂತೆ ಪೀಡಿಸಿದ್ದಾಳೆ. ಪದೇ ಪದೇ ಹಣ ಕೊಡುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಪತಿ ಹಣ ನೀಡುವುದಾಗಿ ಹೇಳಿ ಪತ್ನಿಯನ್ನು ಕರೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಕಲಬುರಗಿ ಗ್ರಾಮೀಣ ಠಾಣಾ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments