ಊಟಕ್ಕೆ ಹೋಟೆಲ್‍ಗೆ ಬರಲ್ಲ ಎಂದ ಪತ್ನಿಯನ್ನು ಕೊಚ್ಚಿ ಕೊಂದ ಗಂಡ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಡಿ.2- ಊಟಕ್ಕೆ ಹೋಟೆಲ್‍ಗೆ ಬರಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಲಾರಿಯಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಶಿರಾ ಗ್ರಾಮಾಂತರ ಪತ್ನಿ ಊಟಕ್ಕೆ ಬಾರದಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಅನಿತಾ(28) ಕೊಲೆಯಾದ ದುರ್ದೈವಿ. ಈಕೆಯ ಪತಿ ಸುರೇಶ್ ಜಾಕಿ ಜಾದವ್ ಪರಾರಿಯಾಗಿದ್ದಾನೆ.

ಕೂಲಿ ಕೆಲಸಕ್ಕೆಂದು 28 ಮಂದಿ ಲಾರಿಯಲ್ಲಿ ಮಹಾರಾಷ್ಟ್ರದಿಂದ ತುಮಕೂರು ಜಿಲ್ಲೆಯ ಮಧುಗಿರಿಗೆ ಬರುತ್ತಿದ್ದರು. ಈ ನಡುವೆ ಶಿರಾ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗ ಡಾಬಾ ಬಳಿ ನಿಲ್ಲಿಸಿ ಊಟಕ್ಕೆಂದು ಎಲ್ಲರೂ ಇಳಿದಿದ್ದಾರೆ. ಆದರೆ ಸುರೇಶ್ ಜಾದವ್ ಪತ್ನಿ ಅನಿತಾ ಊಟ ಬೇಡವೆಂದು ಮಲಗಿಕೊಂಡಿದ್ದಾರೆ. ಈ ವಿಚಾರಕ್ಕೆ ಸುರೇಶ್ ಪತ್ನಿ ಜೊತೆ ಜಗಳವಾಡಿ ಲಾರಿಯಲ್ಲಿದ್ದ ಮಚ್ಚಿನಿಂದಲೇ ಹಲ್ಲೆ ನಡೆಸಿದ್ದಾನೆ.

ಜಗಳ ಬಿಡಿಸಲು ಬಂದವರ ಮೇಲೆಯೂ ಹಲ್ಲೆಗೆ ಮುಂದಾಗಿ ಜನರ ಮಧ್ಯೆ ತಲೆಮರೆಸಿಕೊಂಡಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಶಿರಾ ಗ್ರಾಮಾಂತರ ಠಾಣೆ ಡಿವೈಎಸ್ಪಿ ಕುಮಾರಪ್ಪ, ಶಿರಾ ಠಾಣೆಯ ಇನ್‍ಸ್ಪೆಕ್ಟರ್ ರಂಗಸ್ವಾಮಿ, ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಪತ್ನಿ ಊಟಕ್ಕೆ ಬಾರದಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ದಿಲೀಪ್ ವಿಕ್ರಮ್ ಎಂಬುವರು ಕಾಯಿ ಚಿಪ್ಪು ಹಾಗೂ ಜಾಲಿಮರದ ಬೇರುಗಳನ್ನು ಸುಟ್ಟು ಅದರಿಂದ ಬರುವ ಇದ್ದಿಲನ್ನು ಕೇರಳಕ್ಕೆ ಸರಬರಾಜು ಮಾಡುತ್ತಿದ್ದರು. ಮಧುಗಿರಿಯಲ್ಲಿ ಈ ಕೆಲಸಕ್ಕೆಂದು ಮಹಾರಾಷ್ಟ್ರದಿಂದ 28 ಮಂದಿಯನ್ನು ಕರೆತರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Facebook Comments