ಕಾಡಿನಿಂದ ನಾಡಿಗೆ ಬಂದ ಕಾಡುಕೋಣ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು,ಜ.20- ತಾಲ್ಲೂಕಿನ ಗೆಂಡೇಹಳ್ಳಿ ಗ್ರಾಮದ ಸಮೀಪ ಕಾಡು ಕೋಣ ಕಾಣಿಸಿಕೊಂಡಿದೆ. ಈಗಾಗಲೇ ಕಾಡಾನೆಗಳ ಉಪಟಳದಿಂದ ಬೇಸತ್ತ ಕಾಫಿ ಬೆಳೆಗಾರರು ಮತ್ತು ರೈತರು ಮಂಗಳವಾರ ಕಾಡುಕೋಣ ಪ್ರತ್ಯಕ್ಷವಾಗಿರುವುದರಿಂದ ದಿಗ್ಭ್ರಾಂತರಾಗಿದ್ದಾರೆ.

ಗೆಂಡೇಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡುಕೋಣ ಬೀಡುಬಿಟ್ಟಿದ್ದು ಕಾಫಿ, ಮೆಣಸು, ಬಾಳೆ, ಅಡಿಕೆ ಮುತಾಂದ ಬೆಳೆಗಳನ್ನು ಹಾಳು ಮಾಡಿದೆ. ಕಾಡಾನೆ, ಕಾಡುಹಂದಿ, ಮಂಗ, ನವಿಲುಗಳ ಕಾಟದಿಂದ ಬೆಸತ್ತು ಹೋಗಿದ್ದೇವೆ, ಈಗಿರುವಾಗ ಕಾಡುಕೋಣ ಬಂದಿರುವುದರಿಂದ ಕಾಡಾನೆಗಳಿಗಿಂತ ಹೆಚ್ಚಿನ ತೊಂದರೆಯಾಗಲಿದೆ ಎನ್ನುತ್ತಾರೆ ಕಾಫಿಬೆಳೆಗಾರ ಹಾಗೂ ಕಾಂಗ್ರೆಸ್ ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್.

Facebook Comments

Sri Raghav

Admin