ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡಿದ ಒಂಟಿ ಸಲಗ, ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ಜಿಲ್ಲೆಯ ಸಕಲೇಶಪುರ, ಆಲೂರು ತಾಲ್ಲೂಕಿನ ಹಲವು ಗ್ರಾಮದಲ್ಲಿ ಆನೆ ಉಪಟಳ ಮುಂದುವರೆದಿದ್ದು ಇಲ್ಲಿನ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿರುವ ಆನೆ ಮಳಲಿ ಗ್ರಾಮದಲ್ಲಿ ಒಂಟಿಯಾಗಿ ಓಡಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದೆ.

ಸಕಲೇಶಪುರ ತಾಲ್ಲುಕಿನ ಹಲವೆಡೆ ದಾಂದಲೆ ನಡೆಸುತ್ತಿರುವ ಆನೆಹಿಂಡು ಬೇಕಾಬಿಟ್ಟಿ ಹೋಡಾಡಿಕೊಂಡು ಬೆಳೆಗಳನ್ನು ತಿಂದು ತುಳಿದು ಹಾನಿ‌ ಮಾಡುತ್ತಿವೆ.ಅಲ್ಲದೆ ಒಂಟಿಯಾಗಿ ಓಡಾಡಿವ ಮೂಲಕ ತಮ್ಮ ಮನೆಯಿಂದ ಹೊರಬರಲು ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ.

ಆನೆ ಹಾವಳಿ‌ ಹಿನ್ನೆಲೆಯಲ್ಲಿ ಶಾಲೆಗೆ ಹೊಗಲು ಇಲ್ಲಿನ ಮಕ್ಕಳು ಹೆದರುತ್ತಿದ್ದು ಜೀವ ಭಯದಲ್ಲೆ ದಿನದೂಡುವ ಪರಿಸ್ಥಿತಿ ನಿರ್ಮಾಣ ವಾಗಿದೆ‌ .  ಕೆಲ‌ ಗ್ರಾಮದಲ್ಲಿ ಇದೇ ಪರಿಸ್ಥಿತಿ ಇದ್ದು‌ ಅರಣ್ಯ ಇಲಾಖೆ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಡುತ್ತಿರುವ ಉದಾಹರಣೆ ಕೂಡ ಇದೆ.

ಹಲವು ವರ್ಷದಿಂದ ಆನೆ ಹಾವಳಿ ಕಾರಣ ಈ ಭಾಗದ ರೈತರ ಸ್ಥಿತಿ ಇದೇರೀತಿ ಇದ್ದು ದಿನ ಬೆಳಗಾದರೆ ಆನೆಗಳ ಪುಂಡಾಟ ವಿಪರೀತವಾಗಿದೆ. ಅರಣ್ಯ‌ ಇಲಾಖೆಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲಾ ಎಂದು ದೂರುವ ರೈತರು‌ ಹಾಗೂ ಗ್ರಾಮಸ್ಥರು ಇಲಾಖೆಯ ಸಿಬ್ಬಂದಿ ಆನೆಗಳನ್ನು‌‌ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಟ್ಟುವರೆ ಹೊರತು ಶಾಶ್ವತ ಪರಿಹಾರ ದೊರೆಯುತ್ತಿಲ್ಲಾ.

ಆನೆಗಳ ದಾಳಿ ಹಿನ್ನೆಲೆಯಲ್ಲಿ ಕಾಫಿ ತೋಟಗಳಿಗೆ ಕೆಲಸ ಮಾಡಲು ಕಾರ್ಮಿಕರು‌ ಬರುತ್ತಿಲ್ಲಾ ಇದರಿಂದ ತೋಟದ ನಿರ್ವಹಣಾ ಕಷ್ಟವಾಗಿದೆ ಎಂದು‌ ನೊಂದು ನುಡಿಯುತ್ತಾರೆ ತೋಟದ ಮಾಲೀಕರಾದ ಪ್ರೀತಂ ಹಾಗೂ ಮಂಜುನಾಥ್.

ಆನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದ್ದಾರೆ.ಆನೆ ದಾಳಿ ಮಾಹಿತಿ‌ ,ಆನೆಗಳನ್ನು ಕಾಡಿಗೆ ಹಟ್ಟುವುದನ್ನು ಬಿಟ್ಟರೆ ಬೇರೆ ದಾರಿ‌ಕಾಣದೆ ಕೈಚೆಲ್ಲಿ‌ ಕುಳಿತಿದ್ದಾರೆ. ಆನೆ‌ ಕಾರುಡಾರ್ ಪ್ರಸ್ತಾವನೆ ಕೂಡ‌‌ ನೆನೆಗುದಿಗೆ ಬಿದ್ದಿದೆ. ಒಟ್ಟಾರೆ‌ ಆನೆ ಹಾವಳಿಯಿಂದ ಹೈರಾಣಾಗಿರುವ ಇಲ್ಲಿನ ಜನ ಸರ್ಕಾರದಿಂದ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ‌.

Facebook Comments

Sri Raghav

Admin