ಬೀಕರ ಕಾಡ್ಗಿಚ್ಚಿನಿಂದ 20 ಲಕ್ಷ ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಶವರ್ ಲೇಕ್ (ಅಮೆರಿಕ), ಸೆ.8-ಕ್ಯಾಲಿಫೋರ್ನಿಯಾದಲ್ಲ ಬೀಕರ ಕಾಡ್ಬಿಚ್ಚಿನಿಂದ ದಾಖಲೆ ಪ್ರಮಾಣದ 20 ಲಕ್ಷ ಎಕರೆಗಳಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

ಕಾಡಿನ ಬೆಂಕಿಯ ರೌದ್ರಾವತಾರ ಮತ್ತಷ್ಟು ಉಗ್ರ ಸ್ವರೂಪದ ಅಪಾಯ ಇರುವ ಕಾರಣ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಎಲ್ಲ ಎಂಟು ರಾಷ್ಟ್ರೀಯ ಅರಣ್ಯಗಳನ್ನು ಬಂದ್ ಮಾಡಲಾಗಿದೆ ಎಂದು ಅಮೆರಿಕದ ಅರಣ್ಯ ಸೇವೆಗಳ ಇಲಾಖೆ ತಿಳಿಸಿದೆ.

ಕ್ಯಾಲಿಫೋರ್ನಿಯಾ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಈ ವರ್ಷ ಕಾಡ್ಗಿಚ್ಚಿನ ರೌದ್ರಾವತಾರ ಅತ್ಯಂತ ಭೀಕರವಾಗಿದ್ದು, ಎರಡು ದಶಲಕ್ಷ ಎಕರೆ ಪ್ರದೇಶ ಸುಟ್ಟು ಭಸ್ಮವಾಗಿರುವುದು ಇದೆ ಮೊದಲು. ಈ ದುರ್ಘಟನೆಯಲ್ಲಿ ಸಾವು-ನೋವು ಮತ್ತು ಕೋಟ್ಯಂತರ ಡಾಲರ್‍ಗಳಷ್ಟು ಭಾರೀ ನಷ್ಟ ಸಂಭವಿಸಿದೆ.

ಅರಣ್ಯದಲ್ಲಿ ಜೀವ ಸಂಕುಲಗಳು ಮತ್ತು ಅಪರೂಪದ ಸಸ್ಯ ವರ್ಗಗಳು ಸುಟ್ಟು ಹೋಗಿವೆ.  ಅರಣ್ಯ ಬೆಂಕಿನ ಕೆನ್ನಾಲಿಗೆಯನ್ನು ಶಮನಗೊಳಿಸಲು ಸುಮಾರು 16,000 ಅಗ್ನಿಶಾಮಕ ಸಿಬ್ಬಂದಿ ಕೆಲವು ದಿನಗಳಿಂದ ಶ್ರಮಿಸುತ್ತಿದ್ಧಾರೆ. ಅಗ್ನಿ ಪ್ರಕೋಪವನ್ನು ತಣಿಸಲು ಹೆಲಿಕಾಪ್ಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಕಾಡ್ಗಚ್ಚಿನಿಂದ ಈ ರಾಜ್ಯದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಸಹಸ್ರರು ಗ್ರಾಮಗಳು ಮತ್ತು ವಸತಿ ಪ್ರದೇಶಗಳಿಗೆ ಹಾನಿಯಾಗಿವೆ.

Facebook Comments