ಕಾಡ್ಗಿಚ್ಚಿಗೆ ಇಡೀ ಗ್ರಾಮ ಭಸ್ಮ, 20ಕ್ಕೂ ಹೆಚ್ಚು ಸಾವು…!

ಈ ಸುದ್ದಿಯನ್ನು ಶೇರ್ ಮಾಡಿ

ಗ್ರಿಡ್ಲೆ (ಅಮೆರಿಕ), ಸೆ.11-ಅಮೆರಿಕದ ಕ್ಯಾಲಿಫೋರ್ನಿಯಾದಲ್ಲ ಹಿಂದೆಂದೂ ಕಂಡು ಕೇಳರಿಯದ ಬೀಕರ ಕಾಡ್ಗಿಚ್ಚಿನಿಂದ ಪರ್ವತ ತಪ್ಪಲಿನ ಗ್ರಾಮವೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ 18 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಛಾಗುವ ಆತಂಕವಿದೆ.

ಉತ್ತರ ಕ್ಯಾಲಿಫೋರ್ನಿಯಾzಲ್ಲಿ ನಿನ್ನೆ ಕಾಡ್ಬಿಚ್ಚಿನ ಭಾರೀ ಸ್ಪೋಟದಲ್ಲಿ ಭಾರೀ ಸ್ಫೋಟದಿಂದಾಗಿ ಒಂದೇ ದಿನ 25 ಮೈಲಿ ಪ್ರದೇಶ ಬೆಂಕಿಗಾಹುತಿಯಾಗಿದೆ. ಮೊನ್ನೆಯಷ್ಟೇ ದಾಖಲೆ ಪ್ರಮಾಣದ 20 ಲಕ್ಷ ಎಕರೆಗಳಷ್ಟು ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿತ್ತು.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಬಿರುಗಾಳಿಯಿಂದಾಗಿ ಅರಣ್ಯ ಬೆಂಕಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಿದ್ದು, ಲೆಕ್ಕವಿಲ್ಲದಷ್ಟು ಮನೆಗಳು ಸುಟ್ಟು ಕರಕಲಾಗಿವೆ. ಈ ದುರ್ಘಟನೆಯಲ್ಲಿ ಮತ್ತೆ ಸಾವು-ನೋವು ಸಂಭವಿಸಿದ್ದು. ಸಹಸ್ರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಕ್ಯಾಲಿಫೋರ್ನಿಯಾ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಈ ವರ್ಷ ಕಾಡ್ಗಿಚ್ಚಿನ ರೌದ್ರಾವತಾರ ಅತ್ಯಂತ ಭೀಕರವಾಗಿದ್ದು, ಎರಡು ದಶಲಕ್ಷ ಎಕರೆ ಪ್ರದೇಶ ಸುಟ್ಟು ಭಸ್ಮವಾಗಿರುವುದು ಇದೆ ಮೊದಲು. ಈ ದುರ್ಘಟನೆಯಲ್ಲಿ ಸಾವು-ನೋವು ಮತ್ತು ಕೋಟ್ಯಂತರ ಡಾಲರ್‍ಗಳಷ್ಟು ಭಾರೀ ನಷ್ಟ ಸಂಭವಿಸಿದೆ.

ಅರಣ್ಯದಲ್ಲಿ ಜೀವ ಸಂಕುಲಗಳು ಮತ್ತು ಅಪರೂಪದ ಸಸ್ಯ ವರ್ಗಗಳು ಸುಟ್ಟು ಹೋಗಿವೆ. ಅರಣ್ಯ ಬೆಂಕಿನ ಕೆನ್ನಾಲಿಗೆಯನ್ನು ಶಮನಗೊಳಿಸಲು ಸುಮಾರು 20,000 ಅಗ್ನಿಶಾಮಕ ಸಿಬ್ಬಂದಿ ಕೆಲವು ದಿನಗಳಿಂದ ಶ್ರಮಿಸುತ್ತಿದ್ಧಾರೆ. ಅಗ್ನಿ ಪ್ರಕೋಪವನ್ನು ತಣಿಸಲು ಹೆಲಿಕಾಪ್ಟರ್‍ಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

Facebook Comments