ನಿತೀಶ್‍ ನಾಯಕತ್ವದಲ್ಲೇ ಬಿಹಾರ ವಿಧಾನಸಭಾ ಚುನಾವಣೆ : ಜೆ.ಪಿ.ನಡ್ಡಾ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.23- ಮುಂಬರುವ ಬಿಹಾರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಖ್ಯಮಂತ್ರಿ ನಿತೀಶ್‍ಕುಮಾರ್ ನಾಯಕತ್ವದಲ್ಲೇ ಮೈತ್ರಿಕೂಟ ಎದುರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಬಿಹಾರದಲ್ಲಿ ಯಾರ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಉಂಟಾಗಿದ್ದ ಎಲ್ಲ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.
ವಿಡಿಯೋ ಕಾನರೆನ್ಸ್ ಮೂಲಕ ಬಿಜೆಪಿಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ನಡ್ಡಾ ಅವರು, ಬಿಜೆಪಿ, ಜೆಡಿಯು ಮತ್ತು ಎಲ್‍ಜೆಪಿ ಮೈತ್ರಿಕೂಟ ಒಂದಾಗಿ ಚುನಾವಣೆಯನ್ನು ಎದುರಿಸಲಿದ್ದು, ಪುನಃ ಅಕಾರಕ್ಕೆ ಬರಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧವೂ ಟೀಕಾ ಪ್ರಹಾರ ನಡೆಸಿದ ನಡ್ಡಾ, ಅವರು ಕೇವಲ ಸಮಯವನ್ನು ಕಳೆಯುವುದರಲ್ಲೇ ತಲ್ಲೀನರಾಗಿದ್ದಾರೆ. ಅವರಿಗೆ ಯಾವುದೇ ದೂರದೃಷ್ಟಿಯೂ ಇಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿಯೂ ಇಲ್ಲ. ಚಿಲ್ಲರೆ ರಾಜಕಾರಣ ಮಾಡುವುದೇ ಕಾಯಕವಾಗಿದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಹಾರಕ್ಕೆ ನೀಡಿರುವ ಕೊಡುಗೆಗಳನ್ನು ಪಟ್ಟಿ ಮಾಡಿದ ನಡ್ಡಾ, ಮಕಾನ ಕೈಗಾರಿಕೆ, ಮಧುಬನಿ ಚಿತ್ರಕಲೆ, ಬಾಗಲಪುರ್ ರೇಷ್ಮೆ ಕೈಗಾರಿಕೆ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಆತ್ಮನಿರ್ಭರ್ ಯೋಜನೆ ಮೂಲಕ ಸ್ವಾವಲಂಬನೆಗೂ ಒತ್ತು ನೀಡಿದ್ದೇವೆ. ಪರಿಣಾಮ ಮುಜಾಫರ್ ಮತ್ತು ಮಧುಬನಿಯಲ್ಲಿ ಜೇನು ಘಟಕಗಳು ಪ್ರಾರಂಭವಾಗಿವೆ ಎಂದರು.

ಕೋವಿಡ್ 19 ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ. ಬಿಹಾರದಲ್ಲಿ ಇಂದು ಶೇ.73.48ರಷ್ಟು ಕೊರೊನಾ ಸೋಂಕಿತ ರೋಗಿಗಳು ಗುಣಮುಖರಾಗಿದ್ದಾರೆ. ಇದಕ್ಕಾಗಿ ನಾನು ಸರ್ಕಾರವನ್ನು ವಿಶೇಷವಾಗಿ ಅಭಿನಂದಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನೆ ಮನೆಗೂ ತೆರಳಿ ಪರೀಕ್ಷೆ ನಡೆಸಲಾಗಿದೆ. ಜನಪರವಾದ ಸರ್ಕಾರ ಹೇಗೆ ಕೆಲಸ ಮಾಡಬೇಕೆಂಬುದನ್ನು ನಿತೀಶ್‍ಕುಮಾರ್ ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

Facebook Comments

Sri Raghav

Admin