ಬೋರನ್ ಶತಕ, ಲಂಕಾ ವಿರುದ್ಧದ ಪಂದ್ಯ ಡ್ರಾ ಮಾಡಿಕೊಂಡ ವಿಂಡೀಸ್

ಈ ಸುದ್ದಿಯನ್ನು ಶೇರ್ ಮಾಡಿ

ನಾರ್ತ್‍ಸೌಂಡ್, ಮಾ.26- ವೆಸ್ಟ್‍ಇಂಡೀಸ್‍ನ ಸ್ಫೋಟಕ ಆಟಗಾರ ನಕ್‍ರ್ರೂಮ್ ಬೋರಾನ್ ಅವರ ಆಕರ್ಷಕ ಶತಕ (113*ರನ್, 13 ಬೌಂಡರಿ, 1 ಸಿಕ್ಸರ್) ಹಾಗೂ ಕೇಲ್ ಮೇಯರ್ಸ್‍ರ ಅರ್ಧಶತಕ (52 ರನ್, 5 ಬೌಂಡರಿ) ನೆರವಿನಿಂದ ಲಂಕಾ ವಿರುದ್ಧ ಡ್ರಾ ಸಾಧಿಸಿದೆ. ಶ್ರೀಲಂಕಾ ನೀಡಿದ 374 ರನ್‍ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ವೆಸ್ಟ್‍ಇಂಡೀಸ್ ನಾಲ್ಕನೇ ದಿನವೇ ಆರಂಭಿಕ ಆಟಗಾರ ಜಾನ್ ಕ್ಯಾಂಪೆಬೆಲ್ (11ರನ್)ರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಅಂತಿಮ ಪಂದ್ಯದ ಆರಂಭದಲ್ಲೇ ನಾಯಕ ಕ್ರೆಗ್ ಬರ್ತ್‍ವೇಟ್(23ರನ್) ವಿಕೆಟ್ ಕಳೆದುಕೊಂಡಿದ್ದ ವೆಸ್ಟ್‍ಇಂಡೀಸ್‍ಗೆ ಬೋರಾನ್ ಹಾಗೂ ಮೇಯರ್ಸ್ ಆಸರೆಯಾದರೂ. ಟೆಸ್ಟ್‍ನ ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ ಬೋರಾನ್ ತಂಡದ ಮೊತ್ತವನ್ನು 236 ರನ್‍ಗಳಿಗೆ ಮುಟ್ಟಿಸಿದ್ದರಲ್ಲದೆ ಡ್ರಾ ಮಾಡಿಕೊಳ್ಳಲು ನೆರವಾದರು. ಆಕರ್ಷಕ ಶತಕ ಗಳಿಸಿದ ಬೊರಾನ್ ಪಂದ್ಯ ಪುರುಷೋತ್ತಮರಾದರು. ಲಂಕಾದ ಪರ ವಿಶ್ವ ಫರ್ನಾಂಡೋ ಹಾಗೂ ಲಸಿತ್ ತಲಾ 2 ವಿಕೆಟ್ ಕೆಡವಿದರು.

ಸಂಕ್ಷಿಪ್ತ ಸ್ಕೋರ್:
ಲಂಕಾ ಮೊದಲ ಇನ್ನಿಂಗ್ಸ್ 169, ದ್ವಿತೀಯ ಇನ್ನಿಂಗ್ಸ್ 476ರನ್
ವಿಂಡೀಸ್ ಮೊದಲ ಇನ್ನಿಂಗ್ಸ್ 271, ದ್ವಿತೀಯ ಇನ್ನಿಂಗ್ಸ್ 236/4

Facebook Comments