ಬಾರ್ ಶೆಟರ್ ತೆಗೆದು ಸಾವಿರಾರು ಬೆಲೆಯ ಮದ್ಯ ಕದ್ದ ಕಳ್ಳರು..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ; ನಗರದ ಹೊರವಲಯದ ಕಸ್ತೂರ ಹಳ್ಳಿ ಕ್ರಾಸ್ ಬಳಿಯ ಬೂವನಹಳ್ಳಿ ರಸ್ತೆಯಲ್ಲಿರುವ ಧನಲಕ್ಷ್ಮಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮದ್ಯದ ಬಾಟಲಿಗಳ ಕಳ್ಳತನವಾಗಿದೆ.

ನಗರದ ಹೊರ ವಲಯದಲ್ಲಿ ಮದ್ಯದ ಅಂಗಡಿ ಇರುವುದರಿಂದ ಕಳ್ಳರು ಸುಲಭವಾಗಿ ಅಂಗಡಿಯ ಶೆಟರ್‌ ತೆರೆದು ದಾಸ್ತಾನು ಮಾಡಿದ್ದ ಸಾವಿರಾರು ರೂ ಮದ್ಯವನ್ನು ಕದ್ದೊಯ್ದಿದ್ದಾರೆ.

ನಗರದ ಬಹುತೇಕ ಮದ್ಯದಂಗಡಿಗಳ ಕಳ್ಳತನ ಮರುಕಳಿಸುತ್ತಿದ್ದು ಮದ್ಯವ್ಯಸನಿಗಳ ಸಹನೆಯ ಕಟ್ಟೆ ಒಡೆದಿದೆ. ಲಾಕ್ ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿರುವ ಕಾರಣ ಮದ್ಯದಂಗಡಿಗಳಿಗೆ ಕನ್ನ ಹೊಡೆಯುವ ಕಾರ್ಯದಲ್ಲಿ ಮದ್ಯ ಕಳ್ಳರು ನಿರತರಾಗಿದ್ದಾರೆ.

ಅಬಕಾರಿ ಇಲಾಖೆ ಪೊಲೀಸ್ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸಹ ಮದ್ಯದ ಅಂಗಡಿಗಳ ಕಳ್ಳತನ ಪ್ರಕರಣಗಳು ಪದೇ ಪದೇ ವರದಿಯಾಗುತ್ತಲೇ ಇದೆ. ಅಲ್ಲದೆ ಅಕ್ರಮವಾಗಿ ಮದ್ಯ ಮಾರಾಟವು ಎಗ್ಗಿಲ್ಲದೆ ಸಾಗುತ್ತಿದ್ದು 180 ಎಂ ಎಲ್ ಮದ್ಯ ಸಾವಿರಾರು ರೂ ಗಳಿಗೆ ಅಕ್ರ‌ಮ ಮಾರಾಟವಾಗುತ್ತಿದೆ. ಇದರಿಂದ ಮದ್ಯವ್ಯಸನಿಗಳ ಜೇಬಿಗೆ ಕತ್ತರಿ ಬೀಳುತ್ತಿದೆ .

ಅಲ್ಲದೆ ಕಳ್ಳತನ ಪ್ರಕರಣಗಳಲ್ಲಿ ಮದ್ಯದಂಗಡಿ ಅವರೇ ಅಂಗಡಿ ಕಳ್ಳತನಕ್ಕೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದ್ದು; ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಮುಂಜಾಗೃತ ಕ್ರಮ ವಹಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

Facebook Comments

Sri Raghav

Admin