ರಾಮಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ : ಮದ್ಯ ಸಿಗದೇ ಚಡಪಡಿಸಿದ ಪಾನಪ್ರಿಯರು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಆ.5- ನಗರದಾದ್ಯಂತ ಇಂದು ರಾಮಮಂದಿರಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಯೋಧ್ಯೆಯಲ್ಲಿ ಇಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬೆಳಗ್ಗೆ 9 ರಿಂದಲೇ ದೇವಾಲಯಗಳಲ್ಲಿ ಶ್ರೀರಾಮಮಂದಿರ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.

ನಗರದ ಬಹುತೇಕ ನಾಗರಿಕರು ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ್ದಾರೆ. ವಿಶೇಷವಾಗಿ ಇಂದು ನಗರದಲ್ಲಿರುವ ಸೀತಾ ವಿಲಾಸ ರಸ್ತೆಯಲ್ಲಿರುವ ರಾಮಮಂದಿರ ಸರಸ್ವತಿಪುರ, ಜಯನಗರದ ರಾಮಮಂದಿರಗಳು ಸೇರಿದಂತೆ ಹಲವು ದೇವಾಲಯಗಳಲ್ಲಿ ರಾಮನಿಗೆ ವಿಶೇಷ ಪೂಜೆ ಮಾಡಲಾಯಿತು.

ಮುಂಜಾಗ್ರತಾ ಕ್ರಮವಾಗಿ ಇಂದು ಸಾರ್ವಜನಿಕರು ದೇವಾಲಯಗಳಲ್ಲಿ ಹೆಚ್ಚಾಗಿ ಸೇರಬಾರದು, ತೀರ್ಥ-ಪ್ರಸಾದ ಹಂಚಬಾರದು, ನಗರದಾದ್ಯಂತ ಯಾವುದೇ ವೃತ್ತ, ರಸ್ತೆಗಳಲ್ಲಿ ರಾಮನನ್ನು ಕೂರಿಸಿ ಪೂಜೆ ಮಾಡಿ ಪ್ರಸಾದ ಹಂಚುವುದಾಗಲಿ ಮಾಡದಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾತ್ರಿ 12 ಗಂಟೆಯಿಂದ ಇಂದು ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

# ಮದ್ಯಮಾರಾಟಕ್ಕೆ ಬ್ರೇಕ್:
ರಾಮಂದಿರ ಭೂಮಿಪೂಜೆ ಹಿನ್ನೆಲೆಯಲ್ಲಿ ಮದ್ಯಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಆ.4ರ ರಾತ್ರಿ 10 ಗಂಟೆಯಿಂದ ಆಗಸ್ಟ್ 6ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ ಮಾಡದಂತೆ ನಿಷೇಧಿಸಲಾಗಿದೆ.

Facebook Comments

Sri Raghav

Admin