ಶಾಸಕನ ಜೊತೆ ಹಸೆಮಣೆ ಏರಬೇಕಾದವಳು ಪ್ರಿಯಕನೊಂದಿಗೆ ಪರಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

MLA-MArriage

ಈರೋಡ್, ಸೆ.5-ಪ್ರಿಯಕರನ ಜೊತೆ ವಧು ಪರಾರಿಯಾದ ಹಿನ್ನೆಲೆಯಲ್ಲಿ ಎಐಎ ಡಿಎಂಕೆ ಶಾಸಕರೊಬ್ಬರ ಮದುವೆ ರದ್ದಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.  ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ವಿಧಾನಸಭಾಧ್ಯಕ್ಷ ಪಿ. ಧನಪಾಲ್, ಸಂಪುಟ ಸಚಿವರು, ಶಾಸಕರು, ವಿವಿಧ ಪಕ್ಷಗಳ ಮುಖಂಡರು ಹಾಗೂ ತಮಿಳು ಚಿತ್ರೋದ್ಯಮದ ಖ್ಯಾತನಾಮರ ಸಮ್ಮುಖದಲ್ಲಿ ನೆರವೇರಬೇಕಿದ್ದ ತಮ್ಮ ವಿವಾಹ ರದ್ದಾಗಿರುವುದರಿಂದ ಶಾಸಕ ಈಶ್ವರನ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ತಾವು ಮದುವೆಯಾಗಬೇಕಿದ್ದ ಹುಡುಗಿ ಪ್ರಿಯಕರನೊಂದಿಗೆ ಪರಾರಿಯಾಗಿರುವುದು ಅವರನ್ನು ಪೇಚಿಗೆ ಸಿಲುಕಿಸಿದೆ.

ಭವಾನಿಸಾಗರದ ಎಐಎಡಿಎಂಕೆ ಶಾಸಕ ಈಶ್ವರನ್(43) ಅವರ ವಿವಾಹ ಸೆ.12ರಂದು ಎಂಸಿಎ ಸ್ನಾತಕೋತ್ತರ ಪದವೀಧರೆ ಆರ್. ಸಂಧ್ಯಾ(23) ಅವರೊಂದಿಗೆ ನಿಗದಿ ಯಾಗಿತ್ತು. ಮದುವೆಗಾಗಿ ಭರ್ಜರಿ ಸಿದ್ಧತೆಗಳು ನಡೆದಿದ್ದವು. ಪ್ರಖ್ಯಾತ ಬನ್ನಾರಿ ಅಮ್ಮನ್ ದೇವಸ್ಥಾನದಲ್ಲಿ ಸ್ವಯಂವರ ಕಾರ್ಯಕ್ರಮವಿತ್ತು.
ಆದರೆ, ವಧು ಸಂಧ್ಯಾ, ವಿಘ್ನೇಶ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗಿದೆ.  ಆಕೆ ತನ್ನ ಪ್ರಿಯತಮನೊಂದಿಗೆ ಶನಿವಾರ ಮನೆಯಿಂದ ಪರಾರಿಯಾಗಿದ್ದಾಳೆ.

ಸೆ.1ರಂದು ತಾನು ಸತ್ಯಮಂಗಲಂನಲ್ಲಿರುವ ಸಹೋದರಿ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಸಂಧ್ಯಾ ಮತ್ತೆ ಹಿಂತಿರುಗಲಿಲ್ಲ. ಆಕೆ ಸಹೋದರಿ ಮನೆಗೂ ಹೋಗಿರಲಿಲ್ಲ. ಸಂಧ್ಯಾ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಕಡತೂರ ಪೊಲೀಸ್ ಠಾಣೆಗೆ ದೂರು ನೀಡಿದರು. ಆಕೆ ವಿಘ್ನೇಶ್ ಎಂಬಾತನ ಜತೆ ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಪೋಷಕರು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin