ಸಚಿವರ ನಿವಾಸದ ಎದುರೇ ಆತ್ಮಹತ್ಯೆಗೆ ಮಹಿಳೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

ಕಾಕಿನಾಡ(ಆಂಧ್ರಪ್ರದೇಶ),ಅ.5-ಸಮಾಜ ಕಲ್ಯಾಣ ಇಲಾಖೆ ಸಚಿವ ಪಿನಿಪೆ ವಿಶ್ವರೂಪ ಅವರ ನಿವಾಸದ ಹೊರಗೆ 25 ವರ್ಷದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಅತ್ತೆ -ಮಾವನಿಂದ ನಿರಂತರವಾಗಿ ಕಿರುಕುಳದಿಂದ ಬೇಸತ್ತು, ಇಬ್ಬರು ಮಕ್ಕಳ ತಾಯಿಯಾದ ಸಕಿಲ್ ಮಲ್ಲೇಶ್ವರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹಿಳೆ ಅಮಲಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಎಷ್ಟೇ ಬಾರಿ ಬುದ್ಧಿವಾದ ಹೇಳಿದರೂ ತಮ್ಮ ಅತ್ತೆ-ಮಾವ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಈ ಹಿಂದೆ ಕೂಡ ಸಚಿವರು ಮತ್ತು ಪೊಲೀಸರಿಗೆ ದೂರು ನೀಡಿ ಅತ್ತೆ-ಮಾವನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಿನ್ನೆ ಸಚಿವರ ಬಳಿ ಹೋಗಿ ದೂರು ನೀಡಿದಾಗ ಸಚಿವರಿಂದ ಸರಿಯಾದ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸಚಿವರ ಸಿಬ್ಬಂದಿ ಮತ್ತು ಸ್ಥಳೀಯರು ಮಹಿಳೆಯರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

Facebook Comments