ಸ್ನಾನಕ್ಕಾಗಿ ನೀರು ಕಾಯಿಸಲು ಹೊದ ಮಹಿಳೆ ಸಾವು, ಹಸುಗೂಸು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

ಕೋರಟಗೆರೆ.ಮೇ.22 ಸ್ನಾನಕ್ಕಾಗಿ ನೀರು ಕಾಯಿಸಲು ಹಂಡೆ ಒಲೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವನ್ನಪ್ಪಿದ್ದು.ಹಸುಗೂಸು ಪರಾಗಿರುವ ಘಟನೆ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ತಿಮ್ಮಸಂದ್ರ ಗ್ರಾಮದ ಜ್ಯೋತಿ(22) ಮೃತಪಟ್ಟ ಮಹಿಳೆ.

ಮೃತ ಮಹಿಳೆ ಸ್ನಾನಕ್ಕಾಗಿ ಹಂಡೆ ಒಲೆಗೆ ಬೆಂಕಿ ಹಚ್ಚಲು ಹೊಗಿದ್ದು ಒಲೆ ಹತ್ತಿಕೊಳ್ಳದಿದ್ದಾಗ ಸೀಮೆಎಣ್ಣೆ ಸುರಿದು ಬೆಂಕಿ ಹತ್ತಿಸಲು ಪ್ರಯತ್ನಿಸುತ್ತಿದ್ದಾಗ ಬಾಟಲ್ ಮೆಲೆ ಬಿದ್ದು ಬೆಂಕಿ ಹತ್ತಿಕೊಂಡಿದೆ. ಮಹಿಳೆಯ ಚಿರಾಟ ಗಮನಿಸಿದ ಗ್ರಾಮಸ್ಥರು ಮಹಿಳೆಯನ್ಬು ರಕ್ಷಿಸಿ ತುಮಕೂರು ಆಸ್ಪತ್ರೆ ಗೆ ದಾಖಲಿಸಿದ್ರು.ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಡಿದ್ದಾರೆ.

ಮೃತ ಮಹಿಳೆಯ ಪತಿ ರವಿ ಹಾಗೂ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸುದ್ದಿತಿಳಿದ ಕೊಡಲೆ ಕೋಳಾಲ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ.ಪಿಎಸ್ ಐ ಮಾಹಾಕ್ಷ್ಮಮ್ಮ ಭೇಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments