ಒಂದು ರೂಪಾಯಿ ಕ್ಲಿನಿಕ್‍ನಲ್ಲಿ ಗಂಡು ಶಿಶುಗೆ ಜನ್ಮ ನೀಡಿದ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಅ.10-ಹೆರಿಗೆ ಈಗ ದುಬಾರಿ ವೆಚ್ಚವಾಗುತ್ತಿರುವ ಸಂದರ್ಭದಲ್ಲಿ ಮಹಾರಾಷ್ಟ್ರದ ಥಾಣೆ ರೈಲು ನಿಲ್ದಾಣದಲ್ಲಿರುವ ಒನ್ ರೂಪೀ ಕ್ಲಿನಿಕ್‍ನಲ್ಲಿ ಮಹಿಳೆಯೊಬ್ಬಳು ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕಾಗಿ ಈ ಕ್ಲಿನಿಕ್ ತೆಗೆದುಕೊಂಡ ಶುಲ್ಕ ಕೇವಲ ಒಂದು ರೂಪಾಯಿ..!

ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 29 ವರ್ಷದ ತುಂಬು ಗರ್ಭಿಣಿಯಗೆ ರೈಲಿನಲ್ಲಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ರೈಲ್ವೆ ಸಿಬ್ಬಂದಿ ಆಕೆಯನ್ನು ಥಾಣೆ ರೈಲು ನಿಲ್ದಾಣದ ಪ್ಲಾಟ್‍ಫಾರಂ 2ರಲ್ಲಿದ್ದ ಒನ್-ರೂಪೀ ಕ್ಲಿನಿಕ್‍ಗೆ ದಾಖಲಿಸಿದರು ಅಲ್ಲಿನ ವೈದ್ಯರು ಸುರಕ್ಷಿತ ಹೆರಿಗೆ ಮಾಡಿಸಿದರು.

ಇದಕ್ಕೆ ಪ್ರತಿಯಾಗಿ ಒಂದು ರೂ. ಶುಲ್ಕ ಪಡೆಯಲಾಗಿದೆ. ಶುಭಂತಿ ಪಾತ್ರ ಎಂಬ ಮಹಿಳೆ ಮುದ್ದಾದ ಗಂಡು ಮಗುವಿಗೆ ಇಂದು ಬೆಳಗ್ಗೆ 6.30ರಲ್ಲಿ ಜನ್ಮ ನೀಡಿದ್ದಾಳೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಒಂದು ರೂಪಾಯಿ ಕ್ಲಿನಿಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಹುಲ್ ಘುಳೆ ತಿಳಿಸಿದ್ದಾರೆ.

ಥಾಣೆಯ ರೈಲ್ವೆ ನಿಲ್ದಾಣದಲ್ಲಿರುವ ಈ ಕ್ಲಿನಿಕ್‍ನಲ್ಲಿ ಈವರೆಗೆ 10 ಸುರಕ್ಷಿತ ಹೆರಿಗೆಗಳನ್ನು ಮಾಡಲಾಗಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ.

Facebook Comments

Sri Raghav

Admin