ಯುಎಸ್‌ಬಿ ಕೇಬಲ್ ನಿಂದ ಮಹಿಳೆ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಜು.21- ಹಾಡ ಹಾಗಲೇ ಕೇಬಲ್ ವೈರ್‍ನಿಂದ ಮಹಿಳೆಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಬೆಂಗಳೂರು ಹೊರವಲಯದ ಆನೇಕಲ್‍ನ ವಿನಾಯಕನಗರದ ನಿವಾಸಿ ನಾಗವೇಣಿ (45) ಕೊಲೆಯಾದ ಮಹಿಳೆ.

ನಾಗವೇಣಿ ಅವರನ್ನು ಕೇಬಲ್ ವೈರ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದ್ದು , ನಾಗವೇಣಿ ಅವರ ತಂಗಿಯ ಮಗ ಪವನ್ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸುದ್ದಿ ತಿಳಿದ ಆನೇಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments