ನವಜಾತ ಶಿಶು ಜೊತೆ ಪೊಲೀಸರಿಗೆ ಶರಣಾದ ನಕ್ಸಲ್ ಮಹಿಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ರಾಯ್‍ಪುರ, ಮೇ 16-ನಕ್ಸಲ್ ಉಪಟಳ ಇರುವ ಛತ್ತೀಸ್‍ಗಡದ ವಿವಿಧೆಡೆ ಮಾವೋವಾದಿಗಳ ನಿಗ್ರಹ ಕಾರ್ಯಾಚರಣೆಯನ್ನು ವಿಶೇಷ ಕಾರ್ಯಪಡೆ ತೀವ್ರಗೊಳಿಸಿದ್ದರೆ ಮತ್ತೊಂದೆಡೆ ಮಹಿಳಾ ನಕ್ಸಲರು ಪೊಲೀಸರಿಗೆ ಶರಣಾಗುತ್ತಿರುವ ಒಳ್ಳೆಯ ಬೆಳವಣಿಗೆಗಳು ಕಂಡು ಬಂದಿವೆ.

ಛತ್ತೀಸ್‍ಗಡದ ಕಂಕೇರೆ ಜಿಲ್ಲೆಯಲ್ಲಿ ಕಳೆದ ವಾರವಷ್ಟೇ ಜನ್ಮ ನೀಡಿದ ಮಗುವಿನೊಂದಿಗೆ ನಕ್ಸಲ್ ಮಹಿಳೆಯೊಬ್ಬರು ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯ ತಲೆಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.

ಈ ನಕ್ಸಲ್ ಮಹಿಳೆಯನ್ನು ಸುನಿತಾ ಆಲಿಯಾಸ್ ಕತ್ತಮ್ (30) ಎಂದು ಗುರುತಿಸಲಾಗಿದೆ. ಉತ್ತರ ಬಸ್ತಾರ್ ವಿಭಾಗದ ನಕ್ಸಲ್ ಗುಂಪಿನ ಕ್ಯೂಮಾರಿ ಎಂಬ ಸ್ಥಳೀಯ ಘಟಕದ ಸದಸ್ಯೆಯಾಗಿದ್ದು, ಹೆರಿಗೆ ಹಿನ್ನೆಲೆಯಲ್ಲಿ ಆಕೆಯನ್ನು ಆತನ ಗಂಡ ಹಾಗೂ ಸಹೋದ್ಯೋಗಿಗಳು ಕಂಕೇರಿಯ ಕೊಯಾಲಿಬೆಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿದ್ದರು ಎಂದು ಎಸ್ಪಿ ಕೆ.ಎಲ್ ಧ್ರುವ ತಿಳಿಸಿದ್ದಾರೆ.

ಈಕೆ ಕಳೆದ ವಾರ ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ಆದರೆ, ಅದು ದುರ್ಬಲಗೊಂಡಿತ್ತು. ಮೇ 12 ರಂದು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರುವುದಾಗಿ ಹೇಳಿ, ಹಿರಿಯ ಪೊಲೀಸ್ ಅಧಿಕಾರಿಗಳು ಮುಂದೆ ನಿನ್ನೆ ಶರಣಾಗಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ