ಯುವತಿ ಆತ್ಮಹತ್ಯೆ ಪ್ರಕರಣ : ASI ಸೇರಿದಂತೆ 8 ಮಂದಿ ವಿರುದ್ದ FIR

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.18- ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ವಂಚಿಸಿದ ಹಿನ್ನಲೆಯಲ್ಲಿ ಡೆತ್‍ನೋಟ್ ಬರೆದಿಟ್ಟು ಯುವತಿ ಸಾವಿಗೆ ಶರಣಾದ ಪ್ರಕರಣ ಸಂಬಂಧ ನಂಜನಗೂಡಿನ ಹುಲ್ಲಹಳ್ಳಿ ಠಾಣೆ ಎಎಸ್‍ಐ ಸೇರಿದಂತೆ 8 ಮಂದಿ ವಿರುದ್ದ ಎಫ್‍ಐಆರ್ ದಾಖಲಾಗಿದೆ.

ಎಎಸ್‍ಐ ಎಂ.ಶಿವರಾಜು 8ನೇ ಆರೋಪಿಯಾಗಿದ್ದು ಇವರು ಕರ್ತವ್ಯ ನಿರ್ವಹಿಸುವ ಠಾಣೆಯಲ್ಲೇ ಎಫ್‍ಐಆರ್ ದಾಖಲಾಗಿದೆ. ಯುವತಿ ನ್ಯಾಯ ಕೇಳಿ ಬಂದಾಗ ಸೂಕ್ತವಾಗಿ ಸ್ಪಂದಿಸದೆ ಎಎಸ್‍ಐ ಶಿವರಾಜು ನಿರ್ಲಕ್ಷ್ಯ ವಹಿಸಿದ್ದಾರೆ ಹಾಗೂ ಆರೋಪಿಗಳ ಆಮಿಷಕ್ಕೆ ಬಲಿಯಾಗಿ ಯುವತಿ ನೀಡಿದ ದೂರು ದಾಖಲಿಸಿಲ್ಲವೆಂದು ಆರೋಪ ಹೊರಿಸಲಾಗಿದೆ.

ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಎಫ್‍ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಸುರೇಶ, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಎಂಬವರ ಮೇಲೆ ಎಫ್‍ಐಆರ್‍ದಾಖಲಾಗಿದೆ.

Facebook Comments