27 ವರ್ಷ ಕೋಮಾದಲ್ಲಿದ್ದ ಮಹಿಳೆಗೆ ಪ್ರಜ್ಞೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬರ್ಲಿನ್, ಏ.24-ಅಪಘಾತದಲ್ಲಿ ತೀವ್ರ ಗಾಯಗೊಂಡು ಕಳೆದ 27 ವರ್ಷಗಳಿಂದ ಕೋಮಾ (ಪ್ರಜ್ಞಾಶೂನ್ಯ) ಸ್ಥಿತಿಯಲ್ಲಿದ್ದ ಸಂಯುಕ್ತ ಅರಬ್ ಗಣರಾಜ್ಯ(ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ)ದ ಮಹಿಳೆಯೊಬ್ಬರಿಗೆ ಪ್ರಜ್ಞೆ ಮರಳಿದೆ.

ಮುನಿರಾ ಅಬ್ದುಲ್ಲಾ(59) ಅವರಿಗೆ ಕಳೆದ ಒಂದು ವರ್ಷದಿಂದ ಜರ್ಮನಿ ರಾಜಧಾನಿ ಬರ್ಲಿನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ಮೊನ್ನೆ ಪ್ರಜ್ಞೆ ಮರುಕಳಿಸಿರುವುದಾಗಿ ಅವರ ಪುತ್ರ ಓಮರ್ ಖಚಿತಪಡಿಸಿದ್ದಾರೆ.

1992ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮುನಿರಾ ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞಾಶೂನ್ಯರಾಗಿದ್ದರು. ಆಗ ಅವರಿಗೆ 32 ವರ್ಷ ವಯಸ್ಸು. ಅಂದಿನಿಂದಲೂ ಅವರು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಳೆದ ವರ್ಷ ಜರ್ಮನಿಗೆ ಕರೆದೊಯ್ಯಲಾಗಿತ್ತು.

ಒಂದು ವರ್ಷವಾದರೂ ಅವರು ಚೇತರಿಸಿಕೊಳ್ಳದಿದ್ದಾಗ ಅವರ ಪುತ್ರ ಓಮರ್ ಆಸ್ಪತ್ರೆ ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದರು. ಅಚ್ಚರಿ ಎಂಬಂತೆ ಇದೇ ಸಮಯದಲ್ಲಿ ಮುನಿರಾ ಅವರಿಗೆ ಪ್ರಜ್ಞೆ ಮರಳಿತು.

27 ವರ್ಷಗಳ ನಂತರ ನನ್ನ ತಾಯಿಗೆ ಪ್ರಜ್ಞೆ ಮರಳಿದೆ. ಇಷ್ಟು ಸುದೀರ್ಘ ಕಾಲ ಅವರಿಗೆ ನಾವು ಆರೈಕೆ ಮಾಡಿದ್ದು ಫಲ ನೀಡಿದೆ ಎಂದು ಪುತ್ರ ಓಮರ್ ಸಂತಸದಿಂದ ಹೇಳಿಕೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ