ಕಲ್ಯಾಣಮಂಟಪಗಳಲ್ಲಿ ಚಿನ್ನಾಭರಣ ಕದಿಯುತ್ತಿದ್ದ ಕಳ್ಳಿಯ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Kalli-Women-Arrested

ಮೈಸೂರು,ಜೂ.24- ಕಲ್ಯಾಣಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿ 20 ಗ್ರಾಂ ಚಿನ್ನ, 160 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರಗೂರು ಗ್ರಾಮದ ನಿವಾಸಿ ಶಶಿಕಲಾ(50) ಬಂಧಿತ ಆರೋಪಿ. ಬಂಧಿತಳು ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯುತ್ತಿದ್ದ ಸಮಾರಂಭವೊಂದಕ್ಕೆ ತೆರಳಿ ಕಳವು ಮಾಡಲು ಯತ್ನಿಸಿದ್ದಳು.

ಈ ಸಂದರ್ಭದಲ್ಲಿ ಅನುಮಾಗೊಂಡ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಕಳವು ಮಾಡುತ್ತಿದ್ದ ಬಗ್ಗೆ ತಿಳಿಸಿದ್ದಾಳೆ. ಇತ್ತೀಚೆಗೆ ಕಲ್ಯಾಣ ಮಂಟಪಗಳಲ್ಲಿ ಕಳ್ಳತನವಾಗುತ್ತಿರುವ ಬಗ್ಗೆ ಪೊಲೀಸರಿಗೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳ ಚಲನವಲನಗಳನ್ನು ಕಂಡುಬಂದಿದೆ.

ಅಂದಿನಿಂದ ಆ ಮಹಿಳೆಗಾಗಿ ಶೋಧ ನಡೆಸುತ್ತಿದ್ದರು. ಶುಕ್ರವಾರ ಹೊಯ್ಸಳ ಕರ್ನಾಟಕ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಆಕೆಯನ್ನು ಬಂಧಿಸಿ, ಈಕೆಯಿಂದ ಕಳವು ಮಾಡಿದ್ದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಶಿಕಲಾಳಿಗೆ ವಿಕಲಾಂಗ ಸಹೋದರಿ ಹಾಗೂ ಒಬ್ಬ ಸಹೋದರನಿದ್ದು ನಿರುದ್ಯೋಗಿಯಾಗಿದ್ದಾನೆ. ಬಡತನದಿಂದಾಗಿ ಕಳ್ಳತನ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಲಕ್ಷ್ಮಿಪುರಂ ಠಾಣೆ ಇನ್‍ಸ್ಪೆಕ್ಟರ್ ಮಹದೇವ ಶೆಟ್ಟಿ , ಎಎಸ್‍ಐಗಳಾದ ಗೌರಿಶಂಕರ್, ವನಜಾಕ್ಷಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin