ಕುಡಿದ ಅಮಲಿನಲ್ಲಿ ಮಗನ ತುಟಿ ಕಚ್ಚಿ ತುಂಡರಿಸಿದ ತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಅರ್.ಪೇಟೆ,ಮೇ.5-ಕಳೆದ 43 ದಿನಗಳಿಂದ ಮದ್ಯ ಸಿಗದೆ ಕಂಗಲಾಗಿದ್ದ ತಾಯಿಯೊಬ್ಬಳು ಎಣ್ಣೆ ಸಿಗುತ್ತಿದ್ದಂತೆ ಫುಲ್ ಟೈಟಾಗಿ ಕುಡಿದ ಮತ್ತಿನಲ್ಲಿ ಹೆತ್ತ ಮಗನನ್ನೆ ಹೊಡೆದು ತುಟಿ ಕಚ್ಚಿ ತುಂಡರಿಸಿರುವ ಘಟನೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲೇಟ್ ರಂಗನಾಥ ಎಂಬಾತನ ಪತ್ನಿ ಪಾರ್ವತಿ ಕುಡಿದ ಮತ್ತಿನಲ್ಲಿ ತನ್ನ ಮಗ ಮೋಹನ್ (28) ಎಂಬುವವನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹಲ್ಲೆಗೊಳಗಾಗಿರುವ ಯುವಕನ ಪತ್ನಿ ಜಗಳ ಬಿಡಿಸಲು ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ. ಕುಡಿದ ಮತ್ತಿನಲ್ಲಿ ಮಗನ ತುಟಿಯನ್ನು ಕಚ್ಚಿ ಬಲವಾಗಿ ಎಳೆದು ತುಂಡರಿಸಿದ್ದಾಳೆ.

ಆಕೆಯ ದಾಳಿಗೆ ಇಡಿ ತುಟಿ ಭಾಗವೇ ತುಂಡರಿಸಿ ಹೋಗಿದೆ. ಕೂಡಲೇ ಅಕ್ಕ ಪಕ್ಕದ ಜನರು ಯುವಕನನ್ನು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಿ ತುರ್ತು ಶಸ್ತ್ರಚಿಕಿತ್ಸೆ ಅವಶ್ಯಕತೆ ಇದೆ ಎಂಬ ವೈದ್ಯರ ಸಲಹೆ ಮೇರೆಗೆ ಗಾಯಾಳುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Facebook Comments

Sri Raghav

Admin