‘ಆಂಟಿ ಪ್ರೀತ್ಸೆ’ ಅಂತ ಹಿಂದೆ ಬಿದ್ದ, ಒಪ್ಪದಿದ್ದಕ್ಕೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಡಿ.5- ಆಂಟಿ ಪ್ರೀತ್ಸೇ ಎಂದು ಹಿಂದೆ ಬಿದ್ದಿದ್ದ ಯುವಕನ ಪ್ರೀತಿಯನ್ನು ನಿರಾಕರಿಸಿದ ವಿವಾಹಿತ ಮಹಿಳೆಗೆ ಪಾಗಲ್ ಪ್ರೇಮಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಬಿಳಗುಳ ಗ್ರಾಮದ ವಿಶ್ವನಾಥ ಶೆಟ್ಟಿ ಎಂಬುವರ ಪುತ್ರಿ ಸವಿತಾ (40) ಪಾಗಲ್ ಪ್ರೇಮಿಯ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ನತದೃಷ್ಟ ಮಹಿಳೆ.

ಸವಿತಾಳ ಮೇಲೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ ನಂದೀಶ್‍ಗೌಡನಿಗೆ ಸುಟ್ಟ ಗಾಯಗಳಾಗಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿವಾಹಿತಳಾಗಿದ್ದ ಸವಿತಾ ಪತಿಯನ್ನು ತೊರೆದು ಬಿಳಗುಳದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಾ ಸಮೀಪದ ಕೊಲ್ಲಿ ಬೆಲ್ ಹೋಂ ಸ್ಟೇಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು.

ಪಕ್ಕದ ಎಸ್ಟೇಟ್‍ವೊಂದರಲ್ಲಿ ಚಾಲಕನಾಗಿದ್ದ 28 ವರ್ಷದ ನಂದೀಶ್‍ಗೌಡ 40 ವರ್ಷದ ಸವಿತಾಳನ್ನು ಪ್ರೀತಿಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ತನಗಿಂತ 12 ವರ್ಷ ಕಿರಿಯವನಾದ ನಂದೀಶ್‍ಗೌಡನನ್ನು ಪ್ರೀತಿಸಲು ಸವಿತಾ ನಿರಾಕರಿಸಿದ್ದಳು. ಸವಿತಾಳ ಈ ಧೋರಣೆಯಿಂದ ಕೋಪೆÇೀದ್ರಿಕ್ತನಾದ ಪಾಗಲ್ ಪ್ರೇಮಿ ಕಳೆದ ಭಾನುವಾರ ಹೋಂ ಸ್ಟೇಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಸವಿತಾಳ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಸುಟ್ಟ ಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ ಸವಿತಾ ಮತ್ತು ನಂದೀಶ್‍ಗೌಡನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸವಿತಾ ಮೃತಪಟ್ಟಿದ್ದಾಳೆ.

ನಂದೀಶ್‍ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಆತನ ಪ್ರೀತಿ ನಿರಾಕರಿಸಿದ್ದಕ್ಕೆ ಈ ಕೃತ್ಯವೆಸಗಿದ್ದಾನೆ ಎಂದು ಸವಿತಾಳ ಸಹೋದರ ನಾಗೇಶ್ ರೈ ಪೆÇಲೀಸರಿಗೆ ದೂರು ನೀಡಿದ್ದಾರೆ.

Facebook Comments

Sri Raghav

Admin